ವ್ಯಾಯಾಮದಿಂದ ನೆಗಡಿ ದೂರ…

595

ನೆಗಡಿ ಹಾಗೂ ಇತರ ಇನ್ಫೆಕ್ಷನ್‍ಗಳಿಂದ ಹೊರಬರಬೇಕಾದರೆ ತಪ್ಪದೆ ವ್ಯಾಯಾಮ ಮಾಡುವುದು ಒಳ್ಳೆಯದು. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ರೋಗನಿರೋಧಕ ಶಕ್ತಿಯು ಮತ್ತಷ್ಟು ಸಮರ್ಥವಾಗಿ ಇನ್ಫೆಕ್ಷನ್ ಅನ್ನು ಗುಣಮಾಡುತ್ತದೆ ಎಂದು ತಾಜಾ ಆಗಿ ತಿಳಿದು ಬಂದಿದೆ. ದೇಹದೊಳಗೆ ಪ್ರವೇಶಿಸುವ ಸೂಕ್ಷ್ಮ ಕ್ರಿಮಿಗಳನ್ನು ಎದುರಿಸುವುದರಲ್ಲಿ ರೋಗನಿರೋಧಕ ಶಕ್ತಿಯ ವ್ಯವಸ್ಥೆಯಲ್ಲಿನ ಬಗೆಬಗೆಯ ಜೀವಕೋಶಗಳು ಭಾಗವಹಿಸುತ್ತವೆ, ಇವುಗಳಲ್ಲಿ ಕೆಲವು ಕೋಶಗಳು ನೇರವಾಗಿ ಇನ್ಫೆಕ್ಷನ್‍ನೊಂದಿಗೆ ಹೊರಡುವುದಿಲ್ಲ ಆದರೆ ಉರಿಯೂತ ಪ್ರಕ್ರಿಯೆಯು ತಲೆಯೆತ್ತುವುದಕ್ಕೆ ಪ್ರೋತ್ಸಾಹಿಸುತ್ತವೆ. ಊತ ಎಂದ ಕೂಡಲೇ ನಾವು ಉಬ್ಬವುದು, ಕೆಂಪಾಗುವುದು, ಜ್ವರ ಮುಂತಾದ ಬಾಧೆಗಳೇ ನೆನಪಾಗುತ್ತವೆ. ಆದರೆ ಇದು ನಮಗೆ ಒಳ್ಳೆಯದನ್ನು ಸಹ ಮಾಡುತ್ತದೆ. ಒಳಗೆ ಪ್ರವೇಶಿಸುವ ಸೂಕ್ಷ್ಮ ಕ್ರಿಮಿಗಳೊಂದಿಗೆ ಹೋರಾಡುತ್ತಾ ಇನ್ಫೆಕ್ಷನ್ ತಗ್ಗುವುದಕ್ಕೆ ನೆರವಾಗುತ್ತದೆ.
ಆದರೆ ಈ ಉರಿಯೂತ ಪ್ರಕ್ರಿಯೆಯ ಸಮಸ್ಯೆಯೇನೆಂದರೆ ಇದು ಬಹು ಬೇಗ ನಿಯಂತ್ರಣ ತಪ್ಪುತ್ತದೆ. ಇದರಿಂದ ಕೆಲವು ಜೀವಧಾತುಗಳಿಗೂ ಸಹ ಹಾನಿಯಾಗುತ್ತದೆ. ಉಳಿದ ಸಮಸ್ಯೆಗಳಿಗೂ ಸಹ ದಾರಿಮಾಡಿಕೊಡುತ್ತದೆ. ಹೀಗೆ ಊತಪ್ರಕ್ರಿಯೆಯು ನಿಯಂತ್ರಣ ತಪ್ಪುವುದಕ್ಕೆ ಕೊಬ್ಬಿನ ಕಣಗಳು ನೆರವಾಗುತ್ತವೆಯೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಯಾವುದೇ ಇನ್ಫೆಕ್ಷನ್ ಇಲ್ಲವೆ ಇವು ಊತ ಸಂಬಂಧಿ ಪದಾರ್ಥಗಳನ್ನು ಸಹ ಬಿಡುಗಡೆ ಮಾಡುತ್ತವೆಯೆಂದು ಕಂಡುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಕ್ರಿಮಿಗಳಿಗೆ ದೇಹವು ಸ್ಪಂಧಿಸುವುದರಲ್ಲಿ ವ್ಯಾಯಾಮವು ಎಂತಹ ಪ್ರಭಾವವನ್ನು ತೋರಿಸುತ್ತದೆ ಎಂಬುವುದುದನ್ನು ಗುರುತಿಸುವುದಕ್ಕೆ ದಕ್ಷಿಣಕೊರಿಯಾದ ವಿಜ್ಞಾನಿಗಳು ಇತ್ತೀಚೆಗೆ ಇಲಿಗಳ ಮೇಲೆ ಒಂದು ಅಧ್ಯಯನ ನಡೆಸಿದರು.

ವ್ಯಾಯಾಮದ ಕಾರಣದಿಂದ ದೇಹದಲ್ಲಿಯೂ ಕೊಬ್ಬು ಕರಗುತ್ತದೆ. ಇದನ್ನು ಕೆಲವು ಇಲಿಗಳಿಗೆ ಈಜು ಮುಂತಾದ ವ್ಯಾಯಾಮಗಳನ್ನು ಮಾಡಿಸಿ ಪರಿಣಾಮಗಳ ತಾರತಮ್ಯವನ್ನು ಶೋಧಿಸಿದರು. ವ್ಯಾಯಾಮ ಮಾಡಿದ ಇಲಿಗಳಲ್ಲಿ ಊತದ ಪ್ರಕ್ರಿಯೆಯು ಮತ್ತಷ್ಟು ಹೆಚ್ಚಾಗದೆ ಅಗತ್ಯವಾದಷ್ಟು ಮಟ್ಟಿಗೆ ಉತ್ಪತ್ತಿಯಾಗುವುದನ್ನು ಗುರುತಿಸಿದ್ದಾರೆ. ಇದು ಇಲಿಗಳ ಮೇಲೆ ನಡೆಸಿದ ಅಧ್ಯಯನವಾದರೂ ಮನುಷ್ಯರಲ್ಲಿಯೂ ಇಂತಹ ಪರಿಣಾಮವು ಕಂಡುಬರುವುದರಲ್ಲಿ ಸಂದೇಹವಿಲ್ಲವೆಂದು ಸಂಶೋಧಕರು ಹೇಳುತ್ತಿದ್ದಾರೆ.