ಶಾಲಾ ಆವರಣದಲ್ಲಿ ಅಲ್ಲಾಡ್ಸು ಹಾಡಿಗೆ ನೃತ್ಯ ಮಾಡಿದವರು ಶಿಕ್ಷಕಿಯರಲ್ಲ-ಸಚಿವ ಸುರೇಶ್ ಕುಮಾರ್ ಸ್ಪಷ್ಠನೆ…

208
firstsuddi

ಬೆಂಗಳೂರು : ಸರ್ಕಾರಿ ಶಾಲಾ ಆವರಣದಲ್ಲಿ ಅಲ್ಲಾಡ್ಸು ಅಲ್ಲಾಡ್ಸು ಹಾಡಿಗೆ ನೃತ್ಯ ಮಾಡಿದವರು ಯಾರು ಶಿಕ್ಷಕಿಯರಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಸ್ವತಃ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರೇ ಈ ಪ್ರಕರಣದ ಬಗ್ಗೆ ಸ್ಪಷ್ಠನೆ ನೀಡಿದ್ದು, ನೃತ್ಯ ಮಾಡಿದವರು ಯಾರು ಶಿಕ್ಷಕಿಯರಲ್ಲ ಎಂದು ತಿಳಿಸಿದ್ದಾರೆ. ಬುಧವಾರದಂದು ಶಾಲಾ ಕಾರ್ಯಕ್ರಮದಲ್ಲಿ ಅಲ್ಲಾಡ್ಸು ಅಲ್ಲಾಡ್ಸು ಹಾಡಿಗೆ ಶಿಕ್ಷಕಿಯರು ವೇದಿಕೆ ಮೇಲೆ ಬಾಟಲಿ ಹಿಡಿದು ನೃತ್ಯ ಮಾಡಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಶಿಕ್ಷಣ ಸಚಿವರು ಕೂಡಾ ಶಾಲೆಗೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಈ ಪ್ರಕರಣದ ಸತ್ಯಾಂಶ ಬಹಿರಂಗವಾಗಿದ್ದು, ಈ ಕುರಿತು ಸ್ವತಃ ಸಚಿವ ಸುರೇಶ್ ಕುಮಾರ್ ಅವರೇ ವೀಡಿಯೋದ ಮೂಲಕ ಸ್ಪಷ್ಠನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಶಾಲಾ ಶಿಕ್ಷಕಿಯರದ್ದು ಯಾವುದೇ ತಪ್ಪಿಲ್ಲ. ಮಹಿಳಾ ಸಂಘದವರು ಶಾಲೆಯ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸಂಘದವರು ಈ ಹಾಡಿಗೆ ನೃತ್ಯ ಮಾಡಿದ್ದಾರೆ ಎಂದು ತಿಳಿಸಿದರು. ಅಲ್ಲದೇ ಶಾಲೆಯ ಆವರಣ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಕೊಡಬಾರದು. ಆದರೆ ಮಹಿಳಾ ಸಂಘದವರು ಶಾಲೆಗೆ ಸಹಾಯ ಮಾಡಿದ್ದರಿಂದ ಆವರಣವನ್ನು ಬಿಟ್ಟುಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ ಮಹಿಳಾ ಸಂಘದವರು ಈ ಕುರಿತು ಕ್ಷಮಾಪಣ ಪತ್ರವನ್ನು ಕೊಟ್ಟಿದ್ದಾರೆ. ಇನ್ನು ಮುಂದೆ ಶೈಕ್ಷಣಿಕ ಕಾರ್ಯಕ್ರಮವನ್ನು ಹೊರತುಪಡಿಸಿ ಬೇರೆ ಇಂತಹ ಕಾರ್ಯಕ್ರಮಕ್ಕೆ ಶಾಲಾ ಆವರಣವನ್ನು ಬಿಟ್ಟುಕೊಡಬಾರದು ಎಂದು ಸಚಿವ ಸುರೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಬಿಟ್ಟುಕೊಟ್ಟರೆ ಅದಕ್ಕೆ ಶಾಲಾ ಅಭಿವೃದ್ದಿ ಸಮಿತಿಯೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ.