ಹಾವೇರಿ: ಶಿಗ್ಗಾಂವಿ ವಿಧಾನಸಭಾ ಉಪಚುನಾವಣಾ ಕ್ಷೇತ್ರಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಬರಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ಪರ ಶಿಗ್ಗಾಂವಿ ಕ್ಷೇತ್ರದಾದ್ಯಂತ ಸಂಚರಿಸಿ ಅವರು ಮತ ಪ್ರಚಾರ ನಡೆಸಲಿದ್ದಾರೆ. ಮತ ಪ್ರಚಾರದ ವೇಳೆ ಸಿಎಂ ಜೊತೆಗೆ ಸಚಿವರು, ಶಾಸಕರು ಇರಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಹುಲಗೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುಲಗೂರು, ಶಿಶುನಾಳ, ಅತ್ತಿಗೇರಿ, ಬಸನಾಳ ಗ್ರಾಮ, ಮಧ್ಯಾಹ್ನ 3ಕ್ಕೆ ಹುರಳಿಕೊಪ್ಪ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕುರುಬರ ಮಲ್ಲೂರು, ತೊಂಡುರ, ತೆಗ್ಗಿಹಳ್ಳಿ, ಸಂಜೆ 6ಕ್ಕೆ ಬಂಕಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕುಂದೂರು ಗುಡ್ಡಚನ್ನಪುರ, ನಾರಾಯಣಪುರ, ಬಾಡಾ, ಬಂಕಾಪುರ ನಗರದಲ್ಲಿ ಸಿದ್ದರಾಮಯ್ಯ ಮತ ಪ್ರಚಾರ ನಡೆಸಲಿದ್ದಾರೆ.










