ಸಮಸ್ಯೆ ಹೇಳಿಕೊಳ್ಳಲು ಬಂದ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡ ಸಚಿವ…

189
firstsuddi

ಮಂಡ್ಯ : ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಬಳಿಕ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಮದ್ದೂರು ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಶಂಕುಸ್ಥಾಪನೆ ವೇಳೆ ಗ್ರಾಮಸ್ಥರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಡಿ.ಸಿ. ತಮ್ಮಣ್ಣ ಅವರ ಬಳಿ ಹೇಳಿಕೊಳ್ಳಲು ಬಂದಿದ್ದು, ಸಮಸ್ಯೆ ಬಗ್ಗೆ ವಿವರಿಸುತ್ತಿದ್ದಂತೆ ಡಿ.ಸಿ. ತಮ್ಮಣ್ಣ ಅವರು ಗ್ರಾಮಸ್ಥರ ಮೇಲೆ ಸಿಟ್ಟಿಗೆದ್ದು ಮತ ಹಾಕಲು ಅವರು ಬೇಕು, ಗ್ರಾಮವನ್ನು ಅಭಿವೃದ್ಧಿ ಪಡಿಸಲು ನಾವು ಬೇಕಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.