ಸರ್ಫೇಸಿ ಕಾಯಿದೆ ತಿದ್ದುಪಡಿಗೆ ಶಾಸಕ ಕುಮಾರಸ್ವಾಮಿ ನಿಯೋಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ…

113

ಬೆಂಗಳೂರು : ಸರ್ಫೇಸಿ ಕಾಯಿದೆಯ ವ್ಯಾಪ್ತಿಯಿಂದ ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಗಳನ್ನು ತೆಗೆಯಬೇಕು ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರನ್ನೊಳಗೊಂಡ ನಿಯೋಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿ ಕೊಂಡ ಹಿನ್ನಲೆಯಲ್ಲಿ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಳಿಕ ಸರ್ಫೇಸಿ ಕಾಯಿದೆಯ ವ್ಯಾಪ್ತಿಯಿಂದ ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಗಳನ್ನು ತೆಗೆಯಬೇಕು, ಈ ಕಾಯಿದೆಯಿಂದ ಸಾಲ ತೀರಿಸಲಾಗದ ಕಾಫಿ ಬೆಳೆಗಾರರ ಜಮೀನು ಹರಾಜು ಮಾಡುವ ಅವಕಾಶವಿದ್ದು, ಇದರಿಂದ ಕತ್ತು ಹಿಸುಕಿದಂತಾಗುತ್ತದೆ. ಕೇಂದ್ರ ಮಧ್ಯ ಪ್ರವೇಶಿಸಿ ಈ ಕಾಯಿದೆಯ ವ್ಯಾಪ್ತಿಯಿಂದ ಈ ಬೆಳೆಗಳನ್ನು ಹೊರತು ಪಡಿಸಿ ತಿದ್ದುಪಡಿ ತರಬೇಕು ಎಂದು ಮನವಿ ಮಾಡಲಾಯಿತು..

ಒಂದು ಎಕರೆ, 10ಗುಂಟೆ ಕಾಫಿ ಬೆಳೆಗಾರರನ್ನು ವಾಣಿಜ್ಯ ಬೆಳೆಗಾರರೆಂದು ಪರಿಗಣಿಸಬಾರದು, ಅವರನ್ನು ಅತೀ ಸಣ್ಣ ರೈತರೆಂದು ಪರಿಗಣಿಸಬೇಕು ಇದರಿಂದ ಅವರಿಗೆ ಸಾಲ, ಇತರೆ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ಇದೇ ವೇಳೆ ಅವರ ಗಮನಕ್ಕೆ ತರಲಾಯಿತು.

ನಿಯೋಗದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವೇಗೌಡ್ರು,  ಪಟ್ಟಣ ಪಂಚಾಯಿತಿ ಸದಸ್ಯ ಧರ್ಮಪಾಲ್, ಮುಖಂಡರಾದ ಗಿರೀಶ್ ಹೆಮಕ್ಕಿ,  ಹ್ಯಾರಗುಡ್ಡೆ  ಸಂದರ್ಶ ,,ಪೂರ್ಣೇಶ್ ಮೈಲಿಮನೆ,ಅನಿಲ್, ಕಾರ್ತೀಕೆಯನ್ ಶಾಸ್ತ್ರೀ, ಸಂದೀಪ್ ಇದ್ದರು