ಸಾಕಪ್ಪ ಸಾಕು ಕಿವಿ ಮೇಲೆ ಹೂವು – ಕಾಂಗ್ರೆಸ್‍ನಿಂದ ಪೋಸ್ಟರ್ ಅಭಿಯಾನ…

58
firstsuddi

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ನಿನ್ನೆ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಕಿವಿಯ ಮೇಲೆ ಹೂವು ಇಟ್ಟುಕೊಂಡು ವಿಭಿನ್ನವಾಗಿ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಇದೀಗ, ಸಾಕಪ್ಪ ಸಾಕು ಕಿವಿಯ ಮೇಲೆ ಹೂವು ಎಂಬ ಪೋಸ್ಟರ್ ಅಭಿಯಾನವನ್ನು ನಡೆಸುತ್ತಿದೆ.

ಬೆಂಗಳೂರು ಸೇರಿದಂತೆ ವಿವಿದ ಕಡೆ ಅಭಿಯಾನ ಆರಂಭಿಸಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯೇ ಭರವಸೆ ಎಂದು ರಾಜ್ಯ ಬಿಜೆಪಿ ಹಲವು ಕಡೆಗಳಲ್ಲಿ ಪೋಸ್ಟರ್ ಅಂಟಿಸಿದೆ. ಅದೇ ಪೋಸ್ಟರ್ ಗಳ ಮೇಲೆ ಸಾಕಪ್ಪ ಸಾಕು ಕಿವಿ ಮೇಲೆ ಹೂವ, ಬುರುಡೆ ಭರವಸೆ ಸಾಕು ಎಂದು ಪೋಸ್ಟರ್‌ ಅಂಟಿಸುವ ಮೂಲಕ ವ್ಯಂಗ್ಯ ಮಾಡಲಾಗಿದೆ.

ಈ ಹಿಂದೆ ಇದೇ ಮಾದರಿಯಲ್ಲಿ ಪೇ ಸಿಎಂ ಪೋಸ್ಟರ್ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿತ್ತು. ರಾತ್ರೋ ರಾತ್ರಿ ನಗರದ ಹಲವು ಕಡೆಗಳಲ್ಲಿ ಪೇ ಸಿಎಂ ಎಂಬ ಪೋಸ್ಟರ್ ಅಂಟಿಸಲಾಗಿತ್ತು. ಅದೇ ಮಾದರಿಯಲ್ಲಿ ಇದೀಗ ಕಿವಿಯ ಮೇಲೆ ಹೂವು ಎಂಬ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.