ಸಿಬಿಎಸ್ಇ 10ನೇ ತರಗತಿ ಫಲಿತಾಂಶ ; ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟ…

87
firstsuddi

ನವವದೆಹಲಿ : ಇಂದು ಮಧ್ಯಾಹ್ನ 12 ಗಂಟೆಗೆ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿ ತಿಳಿಸಿದೆ.

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆ ನಡೆಸಿರಲಿಲ್ಲ. ವಿದ್ಯಾರ್ಥಿಗಳಿಗೆ ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡಲಾಗುವುದು ಎಂದು ತಿಳಿಸಿದೆ. ಒಂದು ವೇಳೆ ವಿದ್ಯಾರ್ಥಿಗೆ ತಮ್ಮ ಅಂಕದ ಬಗ್ಗೆ ಸಮಾಧಾನ ಆಗದೇ ಇದ್ದರೆ, ಪುನಃ ಪರೀಕ್ಷೆ ಬರೆಯಲು ತಮ್ಮ ಶಾಲೆಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಫಲಿತಾಂಶವನ್ನು ವೀಕ್ಷಿಸಲು cbseresults.nic.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಹಾಗೆಯೇ cbse.gov.in ಮತ್ತು cbse.nic.in ವೆಬ್ ಸೈಟ್ ನಲ್ಲಿ ಕೂಡ ಫಲಿತಾಂಶದ ಬಗ್ಗೆ ಮಾಹಿತಿ ಪಡೆಯಬಹುದು. ಜೊತೆಗೆ ರೋಲ್ ನಂಬರ್ ಪಡೆಯಲು https://cbseit.in/cbse/2021/rfinder/landing.aspx ಗೆ ಭೇಟಿಕೊಡಬಹುದು.