ಸಿಸ್ ಗಂಜ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ..!

127
firstsuddi

ನವದೆಹಲಿ : ಗುರು ತೇಜ್ ಬಹದ್ದೂರ್ ಅವರ 400ನೇ (ಪ್ರಕಾಶ್ ಪುರಬ್)ಜಯಂತಿಯ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿಯವರು ಸಿಸ್ ಗಂಜ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

“ನಾನು ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ತಲೆ ಬಾಗುತ್ತೇನೆ. ಅವರ ಧೈರ್ಯ ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುವ ಗುಣಗಳಿಂದ ಜಾಗತಿಕವಾಗಿ ಅವರನ್ನು ಗೌರವಿಸಲಾಗುತ್ತದೆ. ಸವೋಚ್ಚ ತ್ಯಾಗ ಅನೇಕರಿಗೆ ಶಕ್ತಿ ಮತ್ತು ಪ್ರೇರಣೆ ನೀಡುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.