ಬೆಂಗಳೂರು : ಸ್ಯಾಂಡಲ್ವುಡ್ ನಟ ಯಶ್ ಹಾಗೂ ನಟಿ ರಾಧಿಕ ಪಂಡಿತ್ ತಮ್ಮ ಮಗಳು ಐರಾ ಜೊತೆಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರ ಮನೆಗೆ ಭೇಟಿ ನಿಡಿದ್ದು, ಸುಮಲತಾ ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಸುಮಲತಾ ಅಂಬರೀಶ್ ಅವರು ಇದೇ ಮೊದಲ ಬಾರಿಗೆ ಯಶ್ ದಂಪತಿಯ ಪುತ್ರಿ ಐರಾಳನ್ನು ನೋಡಿದ್ದು, ಸುಮಲತಾ ಅವರು ಯಶ್ ಮಗಳ ಜೊತೆಗೆ ಕೆಲಕಾಲ ಸಂತಸದಿಂದ ಕಳೆದಿದ್ದಾರೆ. ಅಲ್ಲದೇ ಎಲ್ಲರೂ ಒಟ್ಟಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಫೋಟೋಗಳು ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.











