ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದ ಶಾಸಕ ಶ್ರೀಮಂತ್ ಪಾಟೀಲ್…

251
firstsuddi

ಬೆಂಗಳೂರು : ಅನಾರೋಗ್ಯದ ಹಿನ್ನಲೆ ಮುಂಬೈ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಶ್ರೀಮಂತ್ ಪಾಟೀಲ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ನಾನು ಬಿಜೆಪಿ ನಾಯಕರಿಂದ ಅಪಹರಣವಾಗಿಲ್ಲ. ರೆಸಾರ್ಟ್‍ನಿಂದ ವೈಯಕ್ತಿಕ ಕಾರಣದಿಂದ ಜುಲೈ 17ರಂದು ನಾನು ಚೆನ್ನೈಗೆ ತೆರಳಿದ್ದು, ಆ ಸಂದರ್ಭದಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ವೈದ್ಯರ ಸಲಹೆಯಂತೆ ನಾನು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದೇನೆ. 15ನೇ ಅಧಿವೇಶನದ ಇನ್ನುಳಿದ ಕಲಾಪಗಳಿಗೆ ನಾನು ಗೈರಾಗಲು ಅನುಮತಿ ಕೋರಿ ಈ ಪತ್ರ ಬರೆಯುತ್ತಿದ್ದೇನೆ ಎಂದು ಪತ್ರ ಬರೆದಿದ್ದು, ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.