ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೇಳಿ ಬಂದ ಕಾಸ್ಟಿಂಗ್ ಕೌಚ್ ಆರೋಪಕ್ಕೆ ಸಂಬಂಧಪಟ್ಟಂತೆ, ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್.ಸುರೇಶ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹಿರಿಯ ನಟಿ ತಾರಾ, ಫೈರ್ ನಿಯೋಗದ ಅಧ್ಯಕ್ಷರಾದ ಕವಿತಾ ಲಂಕೇಶ್ ಸೇರಿದಂತೆ ಹಲವು ನಟಿಯರು ಭಾಗಿಯಾಗಿದ್ದಾರೆ.
ಈ ಸಭೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಸಂಬಂಧಪಟ್ಟಂತೆ ಜೊತೆಗೆ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದು, ಹೇಮಾ ಕಮಿಟಿ ವರದಿಯಂತೆ ಕನ್ನಡ ಚಿತ್ರರಂಗದಲ್ಲೂ ಒಂದು ಸಮಿತಿ ರಚಿಸಲು ಫೈರ್ ಸಂಸ್ಥೆ ಆಗ್ರಹಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಣ್ಣದ ಜಗತ್ತು ನೋಡೋಕೆ ಕಲರÐಫುಲ್. ಆದ್ರೆ ಅದರೊಳಗೆ ಇಳಿದವರಿಗೆ ಗೊತ್ತು ಅದು ಎಷ್ಟು ಕೊಳಕು ಅಂತ ಸಿನಿಮಾ ರಂಗದವರೇ ಹೇಳುತ್ತಾರೆ. ಯಾಕಂದ್ರೆ ಇಲ್ಲಿ ಕಾಂಪ್ರಮೈಸ್ ಅನ್ನೋದು ಕಾಮನ್. ಕಾಂಪ್ರಮೈಸ್ ಆದ್ರೇನೆ ನಟಿಯರಿಗೆ ಅಭಿನಯಿಸೋಕೆ ಚಾನ್ಸ್. ಇದರ ವಿರುದ್ದ ಧ್ವನಿ ಎತ್ತಿದವರು ಎಷ್ಟೋ ಜನ. ಹಾಗೆ ಅಷ್ಟು ಬೇಗ ಅವರ ಧ್ವನಿ ಕೂಡ ಅಡಗಿದ್ದು ಅಷ್ಟೇ ಸತ್ಯ. ಆದ್ರೇ ಇನ್ಮುಂದೆ ಹಾಗಾಗಬಾರದು. ಪಾತ್ರಕ್ಕಾಕಿ ಪಲ್ಲಂಗಕ್ಕೆ ಕರೆದವರಿಗೆ ಶಿಕ್ಷೆ ಆಗಲೇ ಬೇಕು ಅಂತ ಕೂಗು ಜೋರಾಗಿದೆ. ಇದರಿಂದ ಸ್ಯಾಂಡಲ್ ವುಡ್ ನಲ್ಲಿರೋ ಕೆಲ ಕಾಮ ಕ್ರಿಮಿಗಳಿಗೆ ನಡುಕ ಶುರುವಾಗಿರೋದಂತು ಸತ್ಯ.
ಮಹಿಳಾ ಆಯೋಗವು ಸಭೆ ನಡೆಸಿ ಹೇಮಾ ವರದಿ ಬಂದ ಮೇಲೆ ಮಲೆಯಾಳಂ ಸಿನಿಮಾ ಜಗತ್ತಿನ ಕಾಮುಕ ಕಣ್ಣುಗಳ ಕರಾಳ ಕತೆಗಳು ಬಯಲಾಗ್ತಿವೆ. ಹಾಗೆ ನಮ್ಮ ಸ್ಯಾಂಡಲ್‍ವುಡ್ನನ ಕಾಮುಕ ಕಣ್ಣುಗಳಿಂದ ಕ್ಲೀನ್ ಮಾಡೋಕೆ ನಮ್ಮ ಸ್ಯಾಂಡಲ್‍ವುಡ್‍ಗೂ ಒಂದು ಕಮಿಟಿಯ ಅವಶ್ಯಕತೆ ಇದೆ ಎಂದು ನಟಿಯರು ಅಭಿಪ್ರಾಯ ತಿಳಿಸಿದ್ದಾರೆ.










