ಹಾಸನ : ಖಾಸಗಿ ಶಾಲಾ ವಾಹನಕ್ಕೆ ಟ್ಯಾಂಕರ್ ಡಿಕ್ಕಿ…

182

ಹಾಸನ : ಖಾಸಗಿ ಶಾಲಾ ವಾಹನಕ್ಕೆ ಟ್ಯಾಂಕರ್ ಡಿಕ್ಕಿಯಾಗಿ ನಾಲ್ಕು ಮಕ್ಕಳು ಗಾಯಗೊಂಡು ಓರ್ವ ವಿದ್ಯಾರ್ಥಿಯ ಕೈ ಮುರಿದು ಹೋಗಿರುವ ಘಟನೆ ಜಿಲ್ಲೆಯ ಮೊಸಳೆ ಗ್ರಾಮದ ಬಳಿ ನಡೆದಿದೆ. ಶಾಲಾ ವಾಹನದಲ್ಲಿ ಒಟ್ಟು 11ಮಕ್ಕಳಿದ್ದು, ಇಬ್ಬರೂ ವಾಹನ ಚಾಲಕರ ಅಜಾಗರುಕತೆಯಿಂದ ಈ ಘಟನೆ ಸಂಭವಿಸಿದ್ದು, ಗಾಯಾಳು ಮಕ್ಕಳನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.