ಹಾಸನ : ಹಬ್ಬದೂಟ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರ ದಾರುಣ ಸಾವು…

300
firstsuddi

ಹಾಸನ : ಹಬ್ಬದೂಟ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ಸೇತುವೆ ಮೇಲಿಂದ ಬೈಕ್ ಸಮೇತ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವನಹಳ್ಳಿ ಬಳಿ ನಡೆದಿದೆ. ಮೈಸೂರು ಜಿಲ್ಲೆ ಸಾಲಿಗ್ರಾಮ ಮೂಲದ ರಂಗಸ್ವಾಮಿ ಹಾಗೂ ಸಿದ್ದರಾಜು ಮೃತ ಯುವಕರು ಎಂದು ಗುರುತಿಸಲಾಗಿದ್ದು, ಸಾಲಿಗ್ರಾಮದಿಂದ ಬಸವನಹಳ್ಳಿಗೆ ಹಬ್ಬಕ್ಕೆ ತೆರಳುತ್ತಿದ್ದ ವೇಳೆ ಸೇತುವೆ ಕುಸಿದಿರುವ ಮಾಹಿತಿ ತಿಳಿಯದೇ ಸೇತುವೆ ಮೇಲಿಂದ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.