ಮೂಡಿಗೆರೆ : ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರೀನ್ ಜೋನ್ ಪಟ್ಟಿಗೆ ಸೇರಿಕೊಂಡಿದ್ದ ಹಾಸನ ಜಿಲ್ಲೆಯಲ್ಲಿ ಇಂದು 5 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ, ಚಿಕ್ಕಮಗಳೂರು-ಹಾಸನ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಹಾಗೂ ಗಡಿ ಭಾಗವಾದ ಮರಗುಂದ-ದೇವಾಲಕೆರೆ ಮಾರ್ಗದ ಸೇತುವೆಯನ್ನು ಬಂದ್ ಮಾಡಲಾಗಿದೆ. ಹಾಸನ ಜಿಲ್ಲೆಯಿಂದ ಗ್ರೀನ್ ಜೋನ್ ಪಟ್ಟಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಗೂ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದ್ದು, ಹೀಗಾಗಿ ಸ್ಥಳೀಯರು ಗಡಿ ಭಾಗದಲ್ಲಿ ಬೃಹದಾಕಾರದ ಬಂಡೆಕಲ್ಲುಗಳನ್ನು ರಸ್ತೆ ಮಧ್ಯೆ ಅಡ್ಡಲಾಗಿ ಇಟ್ಟು ಗಡಿಯನ್ನು ಬಂದ್ ಮಾಡಿದ್ದು, ಸ್ಥಳೀಯರೊಂದಿಗೆ ಗೋಣಿಬೀಡು ಪೊಲೀಸ್ ಠಾಣಾ ಸಿಬ್ಬಂದಿಗಳೂ ಕೂಡಾ ಸಾಥ್ ನೀಡಿದ್ದಾರೆ.









