ಹೃದಯ ಸಂಬಂಧಿ ಖಾಯಿಲೆಯಿಂದ ಖಿನ್ನತೆ – ಕಾರಿನಲ್ಲೇ ಟೆಕ್ಕಿ ಆತ್ಮಹತ್ಯೆ…

77
firstsuddi

ಬೆಂಗಳೂರು : ಹೃದಯ ಸಂಬಂಧಿ ಖಾಯಿಲೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಕಾರಿನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕುರಬರಹಳ್ಳಿ ಜಂಕ್ಷನ್ ಬಳಿ ನಡೆದಿದೆ.

ಮೃತರನ್ನು ವಿಜಯ್ ಕುಮಾರ್(51) ಎಂದು ಗುರುತಿಸಲಾಗಿದೆ. ಮೃತ ವಿಜಯ್ ಕುಮಾರ್ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿದ್ದು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಹಿರಿಯ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ವಿಜಯ್ ಕುಮಾರ್ ಹೃದಯದ ಸಮಸ್ಯೆಗೆ ಆಪರೇಷನ್ ಮಾಡಿಸಿಕೊಂಡಿದ್ದರು. ಆಪರೇಷನ್ ಬಳಿಕವೂ ಉಸಿರಾಟದ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸಮಸ್ಯೆ ಎದುರಾಗಿತ್ತು.

ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿಜಯ್ ಕುಮಾರ್ ಆತ್ಮಹತ್ಯೆಗೂ ಮುನ್ನ ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ನೈಟ್ರೋಜನ್ ಹೊಗೆ ದೇಹದ ಒಳಗೆ ಸೇರಿದರೆ ಪ್ರಜ್ಞೆ ತಪ್ಪಿ ಸುಲಭವಾಗಿ ಸಾಯಬಹುದು ಎಂದು ತಿಳಿದುಕೊಂಡಿದ್ದ ಇವರು ಸೋಮವಾರ ಮಹಾಲಕ್ಷ್ಮಿ ಲೇಔಟ್ ಪಾರ್ಕ್ ಬಳಿಗೆ ತನ್ನ ಕಾರು ತೆಗೆದುಕೊಂಡು ಬಂದಿದ್ದಾರೆ.

ಪಾರ್ಕ್ ಬಳಿ ಕಾರು ನಿಲ್ಲಿಸಿ ಮೊದಲಿಗೆ ಕಾರಿಗೆ ಬಿಸಿಲು ಬೀಳದಂತೆ ಹೊದಿಸುವ ಕವರ್ ತೆಗೆದಿದ್ದರು. ಈ ವೇಳೆ ಅಲ್ಲೇ ಇದ್ದ ಒಬ್ಬರಲ್ಲಿ, ನನಗೆ ಸುಸ್ತಾಗಿದೆ. ಬಿಸಿಲು ಬೀಳದಂತೆ ಕವರ್ ಮುಚ್ಚುವಂತೆ ಹೇಳಿ ಕಾರಿನ ಒಳಗೆ ಕೂತಿದ್ದಾರೆ. ವಿಜಯ್ ಕುಮಾರ್ ಮಾತು ಕೇಳಿ ಆ ವ್ಯಕ್ತಿ ಕಾರಿಗೆ ಕವರ್ ಮುಚ್ಚಿ ಹೋಗಿದ್ದರು.

ಈ ವೇಳೆ ಮುಖಕ್ಕೆ ಕವರ್ ಸುತ್ತಿಕೊಂಡು ಅದರೊಳಗೆ ಪೈಪ್ ಮೂಲಕ ನೈಟ್ರೋಜನ್ ಬಿಟ್ಟುಕೊಂಡಿದ್ದಾರೆ. ಕೆಲ ಹೊತ್ತಿನಲ್ಲೇ ವಿಷ ಗಾಳಿಯಿಂದ ತೀವ್ರ ಆಸ್ಥಸ್ಥರಾಗಿ ಸಾವನ್ನಪ್ಪಿದ್ದಾರೆ. ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ, ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಷ್ಟೊತ್ತಿಗಾಗಲೇ ವಿಜಯ್ ಕುಮಾರ್ ಮೃತಪಟ್ಟಿದ್ದರು.