ಹೃದಯ ಸ್ತಂಭನದಿಂದ ಅನುಪಮಾ ಸೀರಿಯಲ್ ಖ್ಯಾತಿಯ ನಟ ರಿತುರಾಜ್ ಸಿಂಗ್ ನಿಧನ…

63
firstsuddi

ಅನುಪಮಾ ಸೀರಿಯಲ್ ಖ್ಯಾತಿಯ ನಟ ರಿತುರಾಜ್ ಸಿಂಗ್ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ನಟ ಅಮಿತ್ ಬೆಹ್ಲ್ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿ ರಿತುರಾಜ್ ಸಿಂಗ್ ಅವರು 12:30ಕ್ಕೆ ನಿಧನರಾದರು. ಹಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಮೇದೋಜೀರಕ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಯಿಂದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಆದರೆ ದುರಾದೃಷ್ಟವಶಾತ್ ನಿನ್ನೆ ರಾತ್ರಿ ಅವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದ್ದು, ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ. ನಟನ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ರಿತುರಾಜ್ ಅವರು ಕೇವಲ ಹಿಂದಿ ಸಿರೀಯಲ್‌ಗಳು ಮಾತ್ರವಲ್ಲದೇ ಸಿನಿಮಾ ಹಾಗೂ ಕೆಲವು ವೆಬ್ ಸಿರೀಸ್‌ಗಳಲ್ಲಿಯೂ ನಟಿಸಿದ್ದಾರೆ. ಹಿಂದಿಯ ಖ್ಯಾತ ಸೀರಿಯಲ್ ಅನುಪಮಾದಲ್ಲಿ ರಿತುರಾಜ್ ಅವರು ಶಿಸ್ತುಬದ್ಧವಾದ ಹೊಟೇಲ್ ಮಾಲೀಕ ಯಶ್‌ಪಾಲ್‌ನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದರ ಜೊತೆಗೆ ಅವರು ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ವಿವೇಕ್ ಒಬೇರಾಯ್ ಅವರ ವೆಬ್ ಸಿರೀಸ್‌ ಇಂಡಿಯನ್ ಪೊಲೀಸ್ ಫೋರ್ಸ್‌ನಲ್ಲೂ ನಟಿಸಿದ್ದರು.

ರಿತುರಾಜ್ ಅವರು ಬನೇಗಿ ಅಪ್ನಿ ಬಾತ್, ಜ್ಯೋತಿ ಹಿಟ್ಲರ್ ದೀದಿ, ಶಪತ್ ವಾರಿಯರ್ ಹೈ, ಸೇರಿದಂತೆ ಹಲವು ಶೋಗಳಲ್ಲಿ ನಟಿಸಿದ್ದಾರೆ. ಲಾಡೋ 2 ಸೀರಿಯಲ್‌ನಲ್ಲಿ ಬಲವಂತ ಚೌಧರಿ ಪಾತ್ರದಲ್ಲಿ ನಟಿಸಿದ್ದಾರೆ. ವರುಣ್ ಧವನ್ ನಟನೆಯ ‘ಬದ್ರಿನಾಥ್ ಕಿ ದುಲ್ಹನಿಯಾ’, ‘ಯಾರಿಯಾನ್ 2’ ಚಿತ್ರದಲ್ಲಿ ರಿತುರಾಜ್ ಅಭಿನಯಿಸಿದ್ದಾರೆ.