ಹೆಣ್ಮಕ್ಕಳು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣುತ್ತಾರೆ : ಕೈಲಾಶ್ ವಿಜಯವರ್ಗಿಯ.

53
firstsuddi

ಇಂದೋರ್ : ಹೆಣ್ಮಕ್ಕಳು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಆಯೋಜಿಸಲಾಗಿದ್ದ ಹನುಮಾನ್ ಮತ್ತು ಮಹಾವೀರ ಜಯಂತಿ ಸಮಾರಂಭದಲ್ಲಿ ಸಚಿವರು ಈ ರೀತಿ ಮಾತನಾಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 

ನಾನು ರಾತ್ರಿಯಲ್ಲಿ ಹೊರಗೆ ಹೋದಾಗ ಯುವಜನತೆ ಮಾದಕ ದ್ರವ್ಯಗಳ ಅಮಲಿನಲ್ಲಿರುವುದನ್ನು ನೋಡುತ್ತೇನೆ. ದೇವ್ರಾಣೆ ಹೇಳ್ತೀನಿ ಅವರನ್ನು ನೋಡಿದಾಗ ಕಾರಿನಿಂದ ಇಳಿದು ಕೆನ್ನೆಗೆ ಬಾರಿಸಿ ಬಿಡಬೇಕು ಎಂದು ಅನಿಸುತ್ತದೆ ಎಂದಿದ್ದಾರೆ.

ನಾವು ಮಹಿಳೆಯರನ್ನು ದೇವತೆ ಎಂದು ಭಾವಿಸುತ್ತೇವೆ. ಆದರೆ ಹುಡುಗಿಯರು ಎಂಥೆಂಥಾ ಕೊಳಕು ಬಟ್ಟೆಗಳನ್ನು ಧರಿಸುತ್ತಾರೆ. ಇಂತಹ ಹೆಣ್ಮಕ್ಕಳು ಶೂರ್ಪನಖಿಯರಂತೆ ಕಾಣುತ್ತಾರೆ. ದೇವರು ನಿಮಗೆ ಒಳ್ಳೆಯ ದೇಹವನ್ನು ನೀಡಿದ್ದಾನೆ. ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ. ನಾನು ತುಂಬಾ ಚಿಂತಿತನಾಗಿದ್ದೇನೆ ಎಂದಿದ್ದಾರೆ.