ಮುಂಬೈ : ಅತೃಪ್ತ ಶಾಸಕರನ್ನು ಮನವೊಲಿಸಲು ಮುಂಬೈನ ರಿನೈಸೆನ್ಸ್ ಹೋಟೆಲ್ಗೆ ತೆರಳಿದ ಡಿ. ಕೆ. ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದಾರೆ. ಈ ವೇಳೆ ಡಿ.ಕೆ. ಶಿವಕುಮಾರ್ ಅವರು ಹಾಗೂ ಮುಂಬೈ ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ನನ್ನ ಸ್ನೇಹಿತರು ಈ ಹೋಟೆಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಾನು ಅವರನ್ನು ಬೇಟಿಯಾಗಲು ಬಂದಿದ್ದೇನೆ ಬೇರೆ ಯಾರಿಗೂ ಬೆದರಿಕೆ ಹಾಕಲು ಬಂದಿಲ್ಲ. ನನ್ನನ್ನು ಒಳಗೆ ಬಿಡದಿದ್ದರೇ ನಾನು ಇಡೀ ದಿನ ಇಲ್ಲೇ ಕಾಯುತ್ತೇನೆ. ನಾನು ಹೋಟೆಲ್ ಬುಕ್ ಮಾಡಿಕೊಂಡು ಬಂದಿದ್ದೇನೆ. ನನ್ನ ಕುಟುಂಬದವರು ಈ ಹೋಟೆಲ್ನಲ್ಲಿ ಇದ್ದಾರೆ. ನನ್ನ ಕುಟುಂಬದಲ್ಲಿ ಬಿರುಕು ಉಂಟಾಗಿದೆ. ಅದನ್ನು ಸರಿಪಡಿಸಿಕೊಳ್ಳಲು ಬಂದಿದ್ದೇನೆ. ನಾನು ಒಬ್ಬನೇ ಬಂದಿದ್ದೇನೆ ಒಬ್ಬನೇ ಸಾಯುತ್ತೇನೆ. ಬಿಜೆಪಿ ಪಕ್ಷದವರು ನಮ್ಮ ವಿರುದ್ಧ ಘೋಷಣೆ ಕೂಗಿದರು ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.










