ಅಂಬರೀಶ್ ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ : ಸುಮಲತಾ.

52
firstsuddi

ಬೆಂಗಳೂರು : ಇಂದು ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಪತ್ನಿ ಸುಮಲತಾ ಅಂಬರೀಶ್ ಅವರು, ಅಂಬರೀಶ್ ಇಲ್ಲವಾಗಿ 3 ವರ್ಷವಾಗಿದೆ. ಅವರು ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ. ಅವರು ಜೀವನದಲ್ಲಿ ನಡೆದುಕೊಂಡು ಬಂದಿರುವ ಹಾದಿ ನಮಗೆ ಶಕ್ತಿ ಎಂದು ಹೇಳಿದರು.

ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ. ಸ್ಮಾರಕ ಸೇರಿ ಎಲ್ಲೂ ಅಂಬರೀಶ್ ಅವರ ಹೆಸರು ಕೇಳಿಬಂದಿಲ್ಲ. ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಅದಕ್ಕೆ ಹೋರಾಟ ಮಾಡ್ತೀವಿ ಅಂತಿದ್ದಾರೆ. ಆದರೆ ಅಪ್ಪು ಅಗಲಿಕೆಯ ನೋವು ಎಲ್ಲರನ್ನೂ ಕಾಡಿದೆ. ಈ ಸಮಯದಲ್ಲಿ ಹೋರಾಟ ಮಾಡಬಾರದು ಎಂದಿದ್ದೇನೆ ಎಂದು ತಿಳಿಸಿದರು.

ಡಾ.ಅಂಬರೀಶ್ ಚಾರಿಟಬಲ್ ಟ್ರಸ್ಟ್ ಮಾಡಿದ್ದೇವೆ. ಈ ಫೌಂಡೇಶನ್ ಮೂಲಕ ಅಂಬರೀಶ್ ಮಾಡುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಅಂಬರೀಶ್ ಯಾವುದೇ ಸ್ಥಾನ, ಪ್ರಶಸ್ತಿಯನ್ನು ಲಾಬಿ ಮಾಡಿ ಪಡೆದುಕೊಂಡಿಲ್ಲ ಎಂದರು.