ಉಡುಪಿ : ಮಲ್ಪೆಯ ಮೀನುಗಾರರೊಬ್ಬರಿಗೆ ಅಪರೂಪದ ಮೀನು ಬಲೆಗೆ ಬಿದ್ದಿದ್ದು, ಹರಾಜಿನಲ್ಲಿ ಬರೋಬ್ಬರಿ ರೂ.1.80 ಲಕ್ಷ ಮೊತ್ತಕ್ಕೆ ಮಾರಾಟವಾಗಿದೆ.
ಮಲ್ಪೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ ಶಾನ್ ರಾಜ್ ತೊಟ್ಟಂ ಎಂಬವರ ಬಲರಾಮ್ ಹೆಸರಿನ ಬೋಟಿನ ಬಲೆಗೆ ಈ ಮೀನು ಸಿಕ್ಕಿದೆ. ಮಲ್ಪೆ ಬಂದರಿನಲ್ಲಿ 20ಕೆ.ಜಿ. ತೂಕದ ಈ ಮೀನು ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಕೆಜಿಗೆ ರೂ 9060 ರಂತೆ ಸುಮಾರು 1,80,000 ರೂಪಾಯಿಗೆ ಮಾರಾಟವಾಗಿದೆ.
ಈ ಮೀನು ಗೋಳಿ ಅಥವಾ ಘೋಲ್ ಮೀನು ಎಂದು ಕರೆಯಲಾಗುತ್ತಿದ್ದು . ಇದು ಬಹಳಷ್ಟು ಬೆಲೆ ಬಾಳುವ ಮೀನು ಆಗಿರುವುದರಿಂದ ಇದನ್ನು ಸೀ ಗೋಲ್ಡ್ (ಬಂಗಾರದ ಹೊಟ್ಟೆ) ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಇದರ ಮಾಂಸ ಬಹಳಷ್ಟು ರುಚಿ ಮತ್ತು ಔಷಧಿಯ ಗುಣಗಳನ್ನು ಹೊಂದಿದೆ, ಅಲ್ಲದೆ ಇದರ ಗಾಳಿ ಚೀಲವು ಸೌಂದರ್ಯವರ್ಧಕ್ಕೆ ಬಳಕೆ ಮಾಡಲಾಗುತ್ತದೆ.










