ಅಕ್ರಮ ಆಸ್ತಿ- ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಇಡಿ ನೊಟೀಸ್…

149
firstsuddi

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಹಾಗೂ ವಿದೇಶದಲ್ಲಿ ಅಕ್ರಮ ಹೂಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೆ.ಜೆ. ಜಾರ್ಜ್ ಹಾಗೂ ಅವರ ಕುಟುಂಬಸ್ಥರಿಗೆ ಜಾರಿ ನಿರ್ದೇಶನಾಲಯ ಸಮ್ಮನ್ಸ್ ಜಾರಿ ಮಾಡಿದೆ. ಕೆ.ಜೆ. ಜಾರ್ಜ್ ಅವರು ವಿದೇಶದಲ್ಲಿ ಮಕ್ಕಳು ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮ ಆಸ್ತಿಗಳಿಸಿದ್ದಾರೆ. ಈ ಹಣವನ್ನೆಲ್ಲಾ ಭ್ರಷ್ಟಾಚಾರದಿಂದ ಗಳಿಸಿದ್ದು. ಈ ಕುರಿತು ಎಲೆಕ್ಷನ್ ಅಫಿಡವಿಟ್‍ನಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಕಳೆದ ಮೂರು ತಿಂಗಳ ಹಿಂದೆ ರವಿಕೃಷ್ಣಾ ರೆಡ್ಡಿ ಅವರು ಕೆ.ಜೆ. ಜಾರ್ಜ್ ಅವರ ವಿರುದ್ಧ ದೂರನ್ನು ದಾಖಲಿಸಿದ್ದರು. ಅದರಂತೆ ಇಡಿ ಅಧಿಕಾರಿಗಳು ಕೆ.ಜೆ. ಜಾರ್ಜ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಜ.16 ರಂದು ವಿಚಾರಣೆಗೆ ಹಾಜರಾಗುವಂತೆ ಸಮ್ಮನ್ಸ್ ಜಾರಿ ಮಾಡಿದ್ದು, ವಿದೇಶದಲ್ಲಿ ಅಕ್ರಮ ಆಸ್ತಿ ಗಳಿಕೆ, ಅಕ್ರಮ ಹೂಡಿಕೆ ಹಾಗೂ ವಿದೇಶದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ ಕೆ.ಜೆ. ಜಾರ್ಜ್ ಅವರ ಪತ್ನಿ ಸುಜಾತ, ಮಕ್ಕಳಾದ ರಾಣಾ ಹಾಗೂ ರೆನಿಟಾ ಅವರು ಮಾಹಿತಿಯನ್ನು ನೀಡಬೇಕೆಂದು ನೋಟೀಸ್‍ನಲ್ಲಿ ಉಲ್ಲೇಖಿಸಲಾಗಿದೆ.