ಅಡ್ಡಂಡ ಸಿ ಕಾರ್ಯಪ್ಪಗೆ ಜೀವ ಬೆದರಿಕೆ – ದೂರು ದಾಖಲು…

69
firstsuddi

ಮೈಸೂರು : ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರಿಗೆ ಶಿವಮೊಗ್ಗ ಬ್ರಾಹ್ಮಣ ಬೀದಿಯ ವಿಳಾಸದಿಂದ ಜೀವ ಬೆದರಿಕೆ ಪತ್ರ ಬಂದಿದ್ದು, ಈ ಬಗ್ಗೆ ಅಡ್ಡಂಡ ಕಾರ್ಯಪ್ಪ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.

ಇತ್ತೀಚೆಗಷ್ಟೇ ತೀವ್ರ ವಿರೋಧದ ನಡುವೆ ಟಿಪ್ಪು ನಿಜಕನಸು ನಾಟಕ ಕೃತಿ ರಚಿಸಿ, ನಾಟಕವನ್ನು ನಿರ್ದೇಶನ ಮಾಡಿದ್ದರು. ನೀವೀಗ ಕೊಲೆಯಾಗುವ ಹಂತ ತಲುಪಿದ್ದೀರಿ. ನೀವು ನಂಬಿರುವ ದೇವರು ಕೂಡಾ ನಿಮ್ಮನ್ನು ಉಳಿಸುವುದಿಲ್ಲ ಎಂದು ಕಿಡಿಗೇಡಿಗಳು ಪತ್ರದಲ್ಲಿ ಬರೆದಿದ್ದಾರೆ. ಬೆದರಿಕೆ ನೀಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.