ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನನ್ನು 8ಕಿ.ಮೀ ದೂರ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಯೋಧರು…

367
firstsuddi

ರಾಯ್ಪುರ್ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನನ್ನು ಮಂಚವನ್ನು ಹಗ್ಗದಿಂದ ಉದ್ದವಾದ ಕಟ್ಟಿಗೆಗೆ ಕಟ್ಟಿ ಹೊತ್ತುಕೊಂಡು ಹೋಗಿ ಸಿಆರ್‍ಪಿಎಫ್ ಯೋಧರು ಚಿಕಿತ್ಸೆ ಕೊಡಿಸಿದ್ದು, ಛತ್ತೀಸ್‍ಗಡದ ನಕ್ಸಲ್ ಪೀಡಿತ ಪ್ರದೇಶವಾದ ದಾಂತೆವಾಡ ಪ್ರದೇಶದಲ್ಲಿ ಸಿಆರ್‍ಪಿಎಫ್ 231 ಬೆಟಾಲಿಯನ್ ಯೋಧರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಗುಮೋದಿ ಗ್ರಾಮದ 13 ವರ್ಷದ ಅನಾರೋಗ್ಯ ಪೀಡಿತ ಬಾಲಕನನ್ನು ಗಮನಿಸಿದ್ದು, ಹತ್ತಿರದಲ್ಲಿ ಎಲ್ಲಿಯೂ ಚಿಕಿತ್ಸೆ ವ್ಯವಸ್ಥೆ ಇಲ್ಲದ ಕಾರಣ 8ಕಿಲೋ ಮೀಟರ್ ದೂರವಿರುವ ಸೇನಾ ಕ್ಯಾಂಪ್ ವರೆಗೂ ಇಬ್ಬರು ಯೋಧರು ಕಟ್ಟಿಗೆಗೆ ಕಟ್ಟಿದ ಮಂಚದಲ್ಲಿ ಕೂರಿಸಿ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಸೇನಾ ಕ್ಯಾಂಪ್‍ನಲ್ಲಿ ಚಿಕಿತ್ಸೆ ಕೊಡಿಸಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದ್ದು, ಬಾಲಕನನ್ನು ಹೊತ್ತುಕೊಂಡು ಸಾಗುತ್ತಿರುವ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.