ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಎಂದು ಸ್ನೇಹಿತನನ್ನೇ ಕೊಲೆ ಮಾಡಿದ ವ್ಯಕ್ತಿ…

163
firstsuddi

ಬೆಂಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪಟೇಗಾರಪಾಳ್ಯದಲ್ಲಿ ನಡೆದಿದೆ. ರಾಬಿನ್(35) ಕೊಲೆಯಾದವರು. ಮೃತ ರಾಬಿನ್ ಹಾಗೂ ಅವರ ಪತ್ನಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಆರೋಪಿ ತನ್ವೀರ್ ಕೂಡಾ ಅವರ ಜೊತೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಅವರಿಗೆ ಉಳಿದುಕೊಳ್ಳಲು ಸಂತ ಮನೆಯಿಲ್ಲದ ಕಾರಣ ಅಲ್ಲಿರುವ ಶೆಡ್‍ಗಳಲ್ಲಿ ಮಲಗುತ್ತಿದ್ದರು. ಈ ಸಂದರ್ಭದಲ್ಲಿ ತನ್ವೀರ್ ಅವರು ರಾಬಿನ್ ಅವರ ಪತ್ನಿಗೆ ಅನೈತಿಕ ಸಂಬಂಧಕ್ಕಾಗಿ ಒತ್ತಾಯಿಸುತ್ತಿದ್ದರು. ಈ ವಿಷಯವನ್ನು ತಿಳಿದ ರಾಬಿನ್ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದು, ಇದೆ ಕಾರಣಕ್ಕೆ ತನ್ವೀರ್ ರಾಬಿನ್ ಅವರ ತಲೆ ಮಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತನ್ವೀರ್ ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.