ಅಬುಧಾಬಿಯಲ್ಲಿ ಡ್ರೋನ್ ದಾಳಿ – ಇಬ್ಬರು ಭಾರತೀಯರು, ಓರ್ವ ಪಾಕಿಸ್ತಾನಿ ಪ್ರಜೆ ಸಾವು…

70
firstsuddi

ದುಬೈ: ಅಬುಧಾಬಿಯಲ್ಲಿ ಡ್ರೋನ್ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಭಾರತಿಯರು ಹಾಗೂ ಒಬ್ಬ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದು, 6 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಎಡಿಎನ್ ಒಸಿಯ ಸಂಗ್ರಹಣಾ ಘಟಕದ ಬಳಿ ಮೂರು ಪೆಟ್ರೋಲಿಯಂ ಟ್ಯಾಂಕರ್ ಗಳು ಸ್ಫೋಟಗೊಂಡಿವೆ ಹಾಗೂ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಡ್ರೋನ್ ಮೂಲಕ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡ ಎರಡೂ ಸ್ಥಳಗಳಲ್ಲಿ ಡ್ರೋನ್ ನ ಭಾಗಗಳು ಕಂಡುಬಂದಿವೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುಎಇ ಬೆಂಬಲಿತ ಸಮ್ಮಿಶ್ರ ಪಡೆಗಳು ಇತ್ತೀಚೆಗೆ ಯೆಮೆನ್ ನ ಶಕ್ತಿ ಉತ್ಪಾದಿಸುವ ಪ್ರದೇಶಗಳಾದ ಶಬ್ವಾ ಮತ್ತು ಮಾರಿಬ್ ನಲ್ಲಿ ಹೌತಿಗಳ ವಿರುದ್ಧ ಹೋರಾಡಲು ಸೇರಿಕೊಂಡಿವೆ. ಯುಎಇ 2019ರಲ್ಲಿ ಯೆಮೆನ್ ನಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಾಗಿ ಕಡಿಮೆಗೊಳಿಸಿತು ಆದರೆ ಅದು ಸಶಸ್ತ್ರ ಮತ್ತು ತರಬೇತಿ ಪಡೆದ ಯೆಮೆನ್ ಪಡೆಗಳ ಮೂಲಕ ಹಿಡಿತವನ್ನು ಮುಂದುವರೆಸಿದೆ.

ಹೌತಿಗಳು ಸೌದಿ ಅರೇಬಿಯಾದ ಮೇಲೆ ಗಡಿಯಾಚೆಗಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪದೇ ಪದೇ ಪ್ರಾರಂಭಿಸಿದ್ದಾರೆ. ಈ ಹಿಂದೆ ಯುಎಇ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು.