ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದಾಗಿ 8 ಮಂದಿ ಯಾತ್ರಿಕರು ಸಾವು…

84
firstsuddi

ಶ್ರೀನಗರ : ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯಲ್ಲಿ ನೈಸರ್ಗಿಕ ವಿಕೋಪಗಳಿಂದ ಎಂಟು ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಜಸ್ಥಾನದ ಮೊಂಗಿಲಾಲ್(52), ಗುಜರಾತ್ ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್(57), ಕರ್ನಾಟಕದ ಬಸವರಾಜ(68), ಸಿಂಗಾಪುರದ ಪೂನಿಯಾಮೂರ್ತಿ(63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಕಲವಲ ಸುಬ್ರಮಣ್ಯಂ(63), ಉತ್ತರ ಪ್ರದೇಶದ ಗೋವಿಂದ್ ಶರಣ್(34) ಮತ್ತು ಹರಿಯಾಣದ ಸತ್ವೀರ್ ಸಿಂಗ್(70) ಎಂದು ಗುರುತಿಸಲಾಗಿದೆ.

ಜುಲೈ 8ರಂದು ನಡೆದ ಮೇಘಸ್ಫೋಟದಲ್ಲಿ 16 ಯಾತ್ರಿಕರು ಮೃತಪಟ್ಟಿದ್ದರು. ಕೋವಿಡ್ ಹಿನ್ನೆಲೆ ಕಳೆದ 2 ವರ್ಷಗಳಿಂದ ಸ್ಥಗಿತವಾಗಿದ್ದ ಅಮರನಾಥ ಯಾತ್ರೆಯು ಜೂನ್ 30 ರಿಂದ ಪ್ರಾರಂಭವಾಗಿತ್ತು. ಆದರೆ, ಜುಲೈ 8 ರಂದು ಭಾರಿ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾದ ಕಾರಣ ಸ್ಥಗಿತಗೊಳಿಸಲಾಗಿತ್ತು. ನಂತರ ಜುಲೈ 11 ರಿಂದ ಯಾತ್ರೆ ಪುನಾರಂಭವಾಯಿತು.