ಅಮೆಜಾನ್ ಸಿಇಓ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಜೆಫ್ ಬೆಜೋಸ್. ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ…

146
First suddi

ನ್ಯೂಯಾರ್ಕ್ : ಅಮೆಜಾನ್ ಕಂಪನಿಯ ಸಂಸ್ಥಾಪಕ ಜೆಫ್ ಬೆಜೋಸ್ ಸಿಇಓ ಹುದ್ದೆಯಿಂದ ಕೆಳಗಿಳಿದು, ಸಂಸ್ಥೆಯ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಜೆಪ್ ಬೆಜೋಸ್ ಅವರು ಸುಮಾರು 30 ವರ್ಷಗಳಿಂದ ಅಮೆಜಾನ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಈಗ ಅವರ ಸ್ಥಾನಕ್ಕೆ ಕಂಪ್ಯೂಟಿಂಗ್ ಮುಖ್ಯಸ್ಥ ಆಂಡಿ ಜೆಸ್ಸಿಯವರು ಬರಲಿದ್ದಾರೆ.
27 ವರ್ಷಗಳ ಹಿಂದೆ ಇಂಟರ್ನೆಟ್ ಪುಸ್ತಕ ಮಾರಾಟಗಾರರಾಗಿ ಅಮೆಜಾನ್ ಕಂಪನಿಯನ್ನು ಪ್ರಾರಂಭಿಸಿದ ಬೆಜೋಸ್, ಕಂಪನಿಯ ಉದ್ಯೋಗಗಳನ್ನುದ್ದೇಶಿಸಿ ತಮ್ಮ ಬ್ಲಾಗ್ ನಲ್ಲಿ ಬರೆದಿರುವ ಅವರು, ನೂತನ ಉತ್ಪನ್ನಗಳ ಮೇಲೆ ಗಮನ ಹರಿಸಲು ಮತ್ತು ಆರಂಭಿಕ ಅನುಕ್ರಮಗಳನ್ನು ಅಮೆಜಾನ್ ನಲ್ಲಿ ಅಭಿವೃದ್ದಿಪಡಿಸಲು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಮೆಜಾನ್ ಕಂಪನಿಯಲ್ಲಿ ಅತಿ ಹೆಚ್ಚಿನ ಬಂಡವಾಳ ಷೇರು ಹೊಂದಿರುವ ಜೆಫ್, ಕಂಪನಿ ಮೇಲೆ ಹೊಂದಿರುವ ಪ್ರಭಾವ ದೊಡ್ಡ ಮಟ್ಟದಲ್ಲಿದೆ. ಜೆಫ್ ಅವರು ಕಂಪನಿ ತೊರೆದು ಹೋಗುವುದಿಲ್ಲ. ಕಂಪನಿಯ ಪುನರ್ರಚನೆಯಲ್ಲಿ ಆಗುತ್ತಿರುವ ಬದಲಾವಣೆಯಷ್ಟೆ ಎಂದು ಅಮೆಜಾನ್ ನ ಮುಖ್ಯ ಹಣಕಾಸು ಅಧಿಕಾರಿ ಬ್ರಿಯಾನ್ ಒಸ್ಲವ್ಸ್ಕ್ ತಿಳಿಸಿದ್ದಾರೆ.