ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ನಾಲ್ವರು ಸಾವು…

60
firstsuddi

ವಾಷಿಂಗ್ಟನ್ : ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಒಕ್ಲಹೋಮಾದ ತುಲ್ಸಾದಲ್ಲಿನ ಆಸ್ಪತ್ರೆಯ ಆವರಣದಲ್ಲಿ ದುಷ್ಕರ್ಮಿಯೋರ್ವ ಬಂದೂಕಿನಿಂದ ಗುಂಡು ಹಾರಿಸಿ ನಾಲ್ವರನ್ನು ಹತ್ಯೆಗೈದಿದ್ದಾನೆ.

ಸೇಂಟ್ ಫ್ರಾನ್ಸಿಸ್ ಹೆಲ್ತ್ ಸಿಸ್ಟಮ್ ಆಸ್ಪತ್ರೆಯ ಆವರಣದಲ್ಲಿ ನಡೆದ ದಾಳಿ ವೇಳೆ ರೈಫಲ್ ಮತ್ತು ಬಂದೂಕನ್ನು ಹೊಂದಿದ್ದ ಶಂಕಿತ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ. ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ತುಲ್ಸಾ ಪೊಲೀಸ್ ಇಲಾಖೆಯ ಉಪ ಮುಖ್ಯಸ್ಥ ಎರಿಕ್ ಡಾಲ್ಗ್ಲೀಶ್ ಹೇಳಿದ್ದಾರೆ.

ಕಳೆದ ವಾರವಷ್ಟೇ ಗುಂಡಿನ ದಾಳಿಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಬಲಿಯಾಗಿದ್ದ ಘಟನೆ ಟೆಕ್ಸಾಸ್ ನಲ್ಲಿ ನಡೆದಿತ್ತು.