ಅರೆಕೂಡಿಗೆ ಬಳಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ…

269
firstsuddi

ಕೊಟ್ಟಿಗೆಹಾರ : ಅರೆಕೂಡಿಗೆ ಗ್ರಾಮದ ಬಳಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಬಾಳೂರು ಹೋಬಳಿಯ ಅರೆಕೂಡಿಗೆಯ ಕಾಫಿ ಎಸ್ಟೇಟ್‍ವೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಹುಲಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ.

ಬಿ.ಹೊಸಳ್ಳಿ ಭಾಗದಲ್ಲಿ ಹುಲಿಗಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಕೂಬಿಂಗ್ ಕಾರ್ಯಾಚರಣೆ ನಡೆಸಿದ್ದರಿಂದ ಹುಲಿಯು ಸ್ಥಳವನ್ನು ಬದಲಾಯಿಸಿರಬಹುದು. ಬಿ.ಹೊಸಳ್ಳಿ, ಭಾರತೀಬೈಲ್‍ನಲ್ಲಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಹುಲಿಯು ಸೆರೆಯಾಗಿಲ್ಲ. ಬಿಲ್ಲೋಟ ಎಸ್ಟೇಟ್ ಆಥವಾ ಕುಪ್ಪನಹಳ್ಳಿ ಎಸ್ಟೇಟ್ ಬಳಿಯಲ್ಲಿ ಕ್ಯಾಮೆರಾ ಅಳವಡಿಸಿ ಹುಲಿಯ ಚಲನವಲನ ಪತ್ತೆ ಹಚ್ಚಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಉಮೇಶ್ ತಿಳಿಸಿದ್ದಾರೆ.