ಅಸ್ಸಾಂ ಪ್ರವಾಹ : ಮೃತರ ಸಂಖ್ಯೆ 118ಕ್ಕೆ ಏರಿಕೆ…

46
firstsuddi

ಗುವಾಹಟಿ: ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದಾಗಿ ನಾಲ್ವರು ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಪಟ್ಟಣವು ಸತತ ಐದನೇ ದಿನವೂ ಮುಳುಗಡೆಯಾಗಿದೆ.

ಗುರುವಾರ, 30 ಜಿಲ್ಲೆಗಳಲ್ಲಿ 45.34 ಲಕ್ಷ ಜನಸಂಖ್ಯೆಯು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದೆ ಎಂದು ಅಸ್ಸಾಂ ರಾಜ್ಯ ನಿರ್ವಹಣಾ ವಿಪತ್ತು ಪ್ರಾಧಿಕಾರದ (ಎಎಸ್‍ಡಿಎಂಎ) ಬುಲೆಟಿನ್ ತಿಳಿಸಿದೆ.

ಅಸ್ಸಾಂ ರಾಜ್ಯದ ಹಲವು ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಆದರೂ ಧುಬ್ರಿ, ಶಿವಸಾಗರ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಬ್ರಹ್ಮಪುತ್ರ, ದಿಸಾಂಗ್ ಮತ್ತು ಕೊಪಿಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.