ಆಧುನಿಕ ಯುಗದಲ್ಲಿ ಗದ್ದೆ ನಾಟಿಯೇ ವಿರಳವಾಗುತ್ತಿದೆ- ರೋಟರಿ ಅಧ್ಯಕ್ಷ  ಕಿರಣ್ ಶೆಟ್ಟಿ

569
firstsuddi

ಕಳಸ: ರೋಟರಿ ಕ್ಲಬ್ ವತಿಯಿಂದ ಬಾಳೆಹೊಳೆಯ ಶಾಲಾ ಮಕ್ಕಳಿಗೆ ಗದ್ದೆ ನಾಟಿ ಮಾಡುವ ಬಗ್ಗೆ ಪ್ರಾತ್ಯಕ್ಷಿತೆ ಹೇಳಿಕೊಡಲಾಯಿತು.ರೋಟರಿ ಕ್ಲಬ್ ವತಿಯಿಂದ ರೈತ ಮಿತ್ರ ಕಾರ್ಯಕ್ರಮದಡಿಯಲ್ಲಿ ಬಾಳೆಹೊಳೆಯ ಜನಾರ್ಧನ ಗೌಡ ಎಂಬುವವರ ಗದ್ದೆಯಲ್ಲಿ ಶನಿವಾರ ಬಾಳೆಹೊಳೆ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಗದ್ದೆ ನಾಟಿ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ  ಕಿರಣ್ ಶೆಟ್ಟಿ ಮಾತನಾಡಿ ಆದುನಿಕ ಯುಗದಲ್ಲಿ ಗದ್ದೆ ನಾಟಿಯೇ ವಿರಳವಾಗುತ್ತಿದೆ.ರೈತ ಬೆಳೆದ ಭತ್ತದ ಬೆಳೆಗೆ ಸಮರ್ಪಕ ಬೆಲೆ ಸಿಗದೆ ಇರುವ ಪರಿಣಾಮ ಮತ್ತು ಆಳುಗಳ ಸಮಸ್ಯೆಯಿಂದ ಭತ್ತ ಬೆಳೆಯೋದೆ ಅಪರೂಪವಾಗಿದೆ.ಗದ್ದೆಗಳು ಕಾಣೆಯಾಗಿ ಅಡಕೆ ಇನ್ನಿತರೆ ಬೆಳೆಗಳು ಕಾಣುವಂತ ಪರಿಸ್ಥಿ ಮಳೆನಾಡಿನಲ್ಲಿ ಉಂಟಾಗಿದೆ.ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಕೃಷಿಕ ಭತ್ತದ ಬೆಳೆಯನ್ನು ಬೆಳೆಯುವುದು ಕೂಡ ಅನಿವಾರ್ಯವಾಗಿದೆ.ಇವತ್ತಿನ ಮಕ್ಕಳಿಗೆ ಗದ್ದೆಗಿಳಿದು ನಾಟಿ ಮಾಡುವ ವಿದಾನವೇ ಗೊತ್ತಿಲ್ಲ ಆದ್ದರಿಂದ ಮಕ್ಕಳಿಗೆ ಇದರ ಅರಿವನ್ನು ಮೂಡಿಸುವುದು ಮತ್ತು ಭತ್ತ ಕೃಷಿಕರನ್ನು ಉತ್ತೇಜಿಸುವ ಸಲುವಾಗಿ ಕೃಷಿಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.