ವಿಜಯಪುರ : ಆಲೂಗಡ್ಡೆ ಚಿಪ್ಸ್ ತಿಂದು ಯುವಕನೋರ್ವ ತನ್ನ ನಾಲಿಗೆಯನ್ನೇ ಸುಟ್ಟುಕೊಂಡಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ವಿನೋದ್ ಹದಗಲ್ ನಾಲಿಗೆ ಸುಟ್ಟುಕೊಂಡ ಯುವಕ ಎನ್ನಲಾಗಿದ್ದು, ವಿನೋದ್ ಇಂಡಿಯ ಬೇಕರಿಯೊಂದರಲ್ಲಿ ಚಿಪ್ಸ್ನ್ನು ಖರೀದಿ ಮಾಡಿದ್ದು, ಅದನ್ನು ತಿಂದ ಕೂಡಲೇ ನಾಲಿಗೆ ಮೇಲೆ ಸುಟ್ಟ ಗುಳ್ಳೆಗಳು ಎದ್ದಿವೆ. ಚಿಪ್ಸ್ ತಯಾರಿಸಲು ಅತಿಯಾಗಿ ಕೆಮಿಕಲ್ಸ್ ಬಳಸಿದ್ದರಿಂದ ಹೀಗೆ ಆಗಿದೆ ಎಂದು ವಿನೋದ್ ಆರೋಪಿಸಿದ್ದು, ಬೇಕರಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










