ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಹೊರಹಾಕಿದ್ದ ಮಗ ಅರೆಸ್ಟ್…

103
firstsuddi

ರಾಮನಗರ : ಆಸ್ತಿಗಾಗಿ ಹೆತ್ತ ಅಪ್ಪನನ್ನೇ ಮನೆಯಿಂದ ಹೊರಹಾಕಿದ್ದ ಮಗನನ್ನು ರಾಮನಗರ ಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೆಎಸ್ ಆರ್ ಟಿಸಿ ಚಾಲಕನಾಗಿದ್ದ ಕುಮಾರ್ ಬಂಧಿತ ವ್ಯಕ್ತಿ. ಜಿಲ್ಲೆಯ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯನ್ನೇ ಮನೆಯಿಂದ ಹೊರಗೆಸೆದು ಕ್ರೌರ್ಯ ಮೆರೆದಿದ್ದ. ಈ ಘಟನೆಯ ವೀಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವೀಡಿಯೋ ವೈರಲ್ ಆದ ಹಿನ್ನಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಪೊಲೀಸರು ಪಾಪಿ ಮಗನನ್ನು ಬಂಧಿಸಿದ್ದಾರೆ.