ಇಂಡೋನೇಷ್ಯಾದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ…

54
firstsuddi

ಜಕಾರ್ತ : ಪಶ್ಚಿಮ ಇಂಡೋನೇಷ್ಯಾದಲ್ಲಿ ಇಂದು ಬೆಳಗಿನ ಜಾವ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಕಳೆದ ಒಂದೇ ವಾರದ ಅಂತರದಲ್ಲಿ 2 ಬಾರಿ ಭೂಮಿ ಕಂಪಿಸಿದೆ.

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಕರಾವಳಿಯಲ್ಲಿ ಭೂಕಂಪ ಉಂಟಾಗಿದೆ. ಅದರ ಕೇಂದ್ರಬಿಂದುವನ್ನು ಆಚೆ ಪ್ರದೇಶದ ಸಿಂಗಿಲ್ ನಗರದಲ್ಲಿ 48 ಕಿ.ಮೀ ಆಳದಲ್ಲಿದೆ ಪತ್ತೆಹಚ್ಚಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ.

ಇಂದು ಮುಂಜಾನೆ ಸ್ಥಳೀಯ ಸಮಯ ಬೆಳಗ್ಗೆ 6:30ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಇದುವರೆಗೂ ಯಾವುದೇ ಆಸ್ತಿಪಾಸ್ತಿ ಹಾನಿ, ಸಾವಿನ ಬಗ್ಗೆ ವರದಿಯಾಗಿಲ್ಲ.

2021ರ ನವೆಂಬರ್ ನಲ್ಲಿ ಇಂಡೋನೇಷ್ಯಾದಲ್ಲಿ ಉಂಟಾದ ಭೂಕಂಪದಲ್ಲಿ 331 ಜನ ಸಾವನ್ನಪ್ಪಿದ್ದರು. 2018ರಲ್ಲಿ ಉಂಟಾದ ಭೂಕಂಪ ಮತ್ತು ಸುನಾಮಿಯಲ್ಲಿ ಸುಲಾವೇಸಿಯಲ್ಲಿ 4,340 ಜನ ಮೃತಪಟ್ಟಿದ್ದರು.