ನವದೆಹಲಿ : ಇಂದಿನಿಂದ ಎಲ್ಲೆಡೆ ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ರಂಜಾನ್ ಮಾಸಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಹಾಗೂ ಸಾಮರಸ್ಯ ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ ಎಂದಿದ್ದಾರೆ.
ಈ ವರ್ಷ ಮಾರ್ಚ್ 22ರಂದು ರಂಜಾನ್ ಮಾಸ ಆರಂಭವಾಗಿದ್ದು, ಏ.21 ರಂದು ಕೊನೆಗೊಳ್ಳುತ್ತದೆ. 29 ರಿಂದ 30 ದಿನಗಳವರೆಗೆ ಈ ಮಾಸ ಇರುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ನ ಈ ಪವಿತ್ರ ತಿಂಗಳಲ್ಲಿ ದೇಶಾದ್ಯಂತ ಮುಸ್ಲಿಮರು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಈ ತಿಂಗಳ ಉಪವಾಸದ ಬಳಿಕ ಈದ್-ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ.










