ಇಂದಿನಿಂದ 15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭ…

67
firstsuddi

ನವದೆಹಲಿ : ಇಂದಿನಿಂದ ದೇಶಾದ್ಯಂತ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ.

15 ವರ್ಷ ಮೇಲ್ಪಟ್ಟವರು 2007ಕ್ಕೆ ಮೊದಲು ಜನಿಸಿದವರು ಇಂದಿನಿಂದ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದು. ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಮಕ್ಕಳಿಗೆ ನೀಡಲಾಗುವುದು. ಲಸಿಕೆಯ ಡೋಸ್ ಗಳನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜನವರಿ 1 ರಿಂದಲೇ ನೋಂದಣಿ ಪ್ರಕಿಯೆ ಪ್ರಾರಂಭವಾಗಿದ್ದು, ಇಂದು ಲಸಿಕೆ ಆರಂಭಗೊಂಡ ನಂತರ ಸ್ಥಳದಲ್ಲಿಯೇ ಬಂದು ನೋಂದಣಿ ಕೂಡ ಮಾಡಿಕೊಳ್ಳಬಹುದಾಗಿದೆ.

ರಾಜ್ಯದಲ್ಲೂ ಇಂದಿನಿಂದ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭವಾಗಲಿದೆ. ಇಂದು ಬೆಂಗಳೂರಿನ ಬಿಬಿಎಂಪಿ ವಲಯದ ಮೂಡಲಪಾಳ್ಯದ ಭೈರವೇಶ್ವರ ಶಾಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮಕ್ಕಳು ಆಧಾರ್ ಕಾರ್ಡ್ ಅಥವಾ ಶಾಲೆಯ ಗುರುತಿನ ಚೀಟಿ ನೀಡಿದರೆ ಸಾಕು ಲಸಿಕೆ ಸಿಗುತ್ತದೆ.