ಇಂದು ಡೆಹ್ರಾಡೂನ್​ಗೆ ಪ್ರಧಾನಿ ಮೋದಿ ಭೇಟಿ, 18 ಸಾವಿರ ಕೋಟಿ ರೂ.ವೆಚ್ಚದ ಹಲವು ಯೋಜನೆಗಳಿಗೆ ಶಂಕು ಸ್ಥಾಪನೆ…

89
firstsuddi

ಡೆಹ್ರಾಡೂನ್, ಉತ್ತರಾಖಂಡ್ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರಾಖಂಡ್ ನ ಡೆಹ್ರಾಡೂನ್​ಗೆ ಭೇಟಿ ನೀಡಲಿದ್ದು, ಒಟ್ಟಾರೆ 18 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಿ ಮೋದಿ 8,300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಯೋಜನೆ ಸೇರಿದಂತೆ 11 ಅಭಿವೃದ್ಧಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಪೂರ್ವ ಪೆರಿಫೆರಲ್ ಎಕ್ಸ್ ಪ್ರೆಸ್ ವೇ ಜಂಕ್ಷನ್ ನಿಂದ ಡೆಹ್ರಾಡೂನ್ ಗೆ ಸಂಪರ್ಕ ಕಲ್ಪಿಸಲಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಡೆಹ್ರಾಡೂನ್ ನಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಸರಬರಾಜು, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೂ ಶಂಕುಸ್ಥಾಪನೆ ನಡೆಯಲಿದೆ. ಇದರೊಂದಿಗೆ ಹರಿದ್ವಾರದಲ್ಲಿ ಹೊಸ ವೈದ್ಯಕೀಯ ಕಾಲೇಜು, ರಾಜ್ಯದ ಸುಗಂಧ ದ್ರವ್ಯ ಪ್ರಯೋಗಾಲಯ, ವ್ಯಾಸಿ ಜಲವಿದ್ಯುತ್ ಯೋಜನೆಗಳೂ ಉದ್ಘಾಟನೆಯಾಗಲಿವೆ. ಜೊತೆಗೆ ಪ್ರಧಾನಿ ಡೆಹ್ರಾಡೂನ್ ನಲ್ಲಿ ಮಕ್ಕಳ ಸ್ನೇಹಿ ನಗರ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.