ಇಂದ್ರಾಳಿ ಜಯದೇವ್ ಮೋಟಾರ್ಸ್ ದ್ವಿಚಕ್ರ ವಾಹನಗಳ ಶೋರೂಂ ಕಟ್ಟಡದಲ್ಲಿ ಭಾರಿ ಬೆಂಕಿ…

179
firstsuddi

ಉಡುಪಿ: ಇಲ್ಲಿನ ಇಂದ್ರಾಳಿ ರೈಲ್ವೇ ಸೇತುವೆ ಬಳಿ ಇರುವ ದ್ವಿಚಕ್ರ ವಾಹನಗಳ ಶೋರೂಂ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿರುವ ಘಟನೆ ಆದಿತ್ಯವಾರ ರಾತ್ರಿ ಸಂಭವಿಸಿದೆ. ಮೂರು ಮಹಡಿಗಳ ಕಟ್ಟಡ ಇದಾಗಿದ್ದು ಎರಡನೇ ಮಹಡಿಯಲ್ಲಿ ದ್ವಿಚಕ್ರ ವಾಹನಗಳ ಶೋರೂಂ ಇದೆ.ಬೆಂಕಿಯ ತೀವ್ರತೆಗೆ ಶೋರೂಂ ಸಂಪೂರ್ಣ ಕರಕಲಾಗಿದ್ದು, ಬೆಂಕಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡಲಾಗುತ್ತಿದೆ. ಮೂರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಿಯಂತ್ರಣ ಕಾರ್ಯಾಚರಣೆ ನಡೆಯುತ್ತಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಆದಿತ್ಯವಾರ ರಾತ್ರಿ ಈ ಕಟ್ಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ಪೂರ್ತಿ ಕಟ್ಟಡವನ್ನು ವ್ಯಾಪಿಸಿಕೊಳ್ಳತೊಡಗಿದೆ. ಈ ಕಟ್ಟಡದ ಪಕ್ಕದಲ್ಲೇ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಹ ಇದ್ದು ಸ್ಥಳೀಯರಲ್ಲಿ ಅಪಾಯದ ಭೀತಿ ಎದುರಾಗಿದೆ.