ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ರಾಜೀನಾಮೆ…

49
firstsuddi

ರೋಮ್ : ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸರ್ಕಾರದ ಮೈತ್ರಿ ಪಕ್ಷಗಳು ವಿಶ್ವಾಸ ಮತವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಡ್ರಾಘಿ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸೆರ್ಗಿಯೋ ಮಾಟರೆಲ್ಲಾ ಅವರಿಗೆ ಡ್ರಾಘಿ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸದ್ಯ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವಂತೆ ಅಧ್ಯಕ್ಷರು ಅವರಲ್ಲಿ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಧಕ್ಷ ಮಾಟರೆಲ್ಲಾ ಅವರು ಸಂಸತ್ ವಿಸರ್ಜನೆ ಮಾಡಲಿದ್ದಾರೆಯೇ ಅಥವಾ ಚುನಾವಣೆಗೆ ಕರೆ ನೀಡಲಿದ್ದಾರೆಯೇ ಎಂಬುದು ಸದ್ಯ ತಿಳಿದು ಬಂದಿಲ್ಲ.