ಬೆಂಗಳೂರು: ಯುವತಿಯೊಬ್ಬಳನ್ನ ಪ್ರೀತಿಸಿ ಇನ್ನೇನು ಆಕೆಯೊಂದಿಗೆ ಸಪ್ತಪದಿ ತುಳಿದು ಸಂಸಾರ ನಡೆಸಬೇಕಿದ್ದ ಆಟೋ ಚಾಲಕನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ರಾತ್ರಿ 9.30ರ ಸುಮಾರಿಗೆ ನಗರದ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಟಿಂಬರ್ ಲೇಔಟ್‌ನಲ್ಲಿ ನಡೆದಿದೆ.
10ಕ್ಕೂ ಹೆಚ್ಚು ದುಷ್ಕರ್ಮಿಗಳು 24 ವರ್ಷದ ಅರುಣ್‌ನನ್ನು ಕೊಲೆ ಮಾಡಿದ್ದಾರೆ. ಯುವತಿಯೊಬ್ಬಳನ್ನು ಅರುಣ್ ಪ್ರೀತಿಸುತ್ತಿದ್ದ. ಮುಂದಿನ ತಿಂಗಳು ಮದುವೆ ಕೂಡ ಫಿಕ್ಸ್ ಆಗಿತ್ತು ಎನ್ನಲಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೆ ಕಾರಣವೇನು ಎನ್ನುವುದರ ಕುರಿತು ತನಿಖೆ ಕೈಗೊಂಡಿದ್ದಾರೆ.










