ನವದೆಹಲಿ : ಕೋವಿಡ್-19 ಪ್ರಕರಣಗಳು ಇಳಿಮುಖವಾಗಿರುವುದರಿಂದ ದೆಹಲಿಯಲ್ಲಿದ್ದ 500 ರೂಪಾಯಿ ಮಾಸ್ಕ್ ದಂಡವನ್ನು ಹಿಂಪಡೆಯಲಾಗಿದೆ.
ಈ ಹಿಂದೆ ಹೆಚ್ಚುತ್ತಿದ್ದ ಕೋವಿಡ್ ಪ್ರಕರಣಗಳಿಂದಾಗಿ ಏಪ್ರಿಲ್ ನಲ್ಲಿ ಸರ್ಕಾರ ದಂಡ ಹಾಕಲು ಮುಂದಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿತ್ತು. ಇದೀಗ 6 ತಿಂಗಳ ಬಳಿಕ ಸರ್ಕಾರ ಮಾಸ್ಕ್ ಫೈನ್ ರದ್ದುಪಡಿಸಿದೆ.
ಆದರೂ ಎನ್ ಡಿಎಂಎ ಸದಸ್ಯರಾದ ಡಾ ರಾಜೇಂದ್ರ ಸಿಂಗ್ ಅವರು ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 15 ರವರೆಗೆ ಮಾಸ್ಕ್ಗಳನ್ನು ಧರಿಸುವುದನ್ನು ಮುಂದುವರಿಸಲು ಸಲಹೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ದೆಹಲಿಯಲ್ಲಿ ಸದ್ಯ ಮಾಸ್ಕ್ ಗಳ ಮೇಲಿನ ದಂಡವನ್ನು ಹಿಂತೆಗೆದುಕೊಳ್ಳಲಾಗಿದೆ.










