ಇಬ್ಬರು ಸಹೋದರಿಯರ ಶಿರಚ್ಛೇದ ಮಾಡಿದ ಅಕ್ಕ.

76
firstsuddi

ಲಕ್ನೋ: ಯುವತಿಯೊಬ್ಬಳು ತನ್ನ ಇಬ್ಬರು ಸಹೋದರಿಯರ ಶಿರಚ್ಛೇದ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೆಲವೇ ಗಂಟೆಗಳ ನಂತರ ಆರೋಪಿ ಯುವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲರಾಯ ಪೊಲೀಸ್ ಠಾಣೆ ವ್ಯಾಪ್ತಿಯ ಬಹದ್ದೂರ್‌ಪುರ ಗ್ರಾಮದಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತರನ್ನು ಜೈವೀರ್ ಸಿಂಗ್ ಅವರ ಪುತ್ರಿಯರಾದ ಸುರಭಿ (6) ಮತ್ತು ರೋಷ್ನಿ (4) ಎಂದು ಗುರುತಿಸಲಾಗಿದೆ. ಅವರ ಮನೆಯ ವಿವಿಧ ಕೊಠಡಿಗಳಲ್ಲಿ ವಿಕೃತ ರೀತಿಯಲ್ಲಿ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಈ ಸಹೋದರಿಯರ ಅಕ್ಕ ಅಂಜಲಿಯನ್ನು ಬಂಧಿಸಲಾಗಿದೆ. ಈ ಅಪರಾಧವನ್ನು ಯುವತಿ ಒಪ್ಪಿಕೊಂಡಿದ್ದು, ಈ ಹತ್ಯೆಯ ಉದ್ದೇಶವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತನಿಖೆಯ ನೇತೃತ್ವ ವಹಿಸಿರುವ ಕಾನ್ಪುರ ವಲಯದ ಐಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯವನ್ನು ಮರೆಮಾಚುವುದು ಅಥವಾ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಯುವತಿಯೊಂದಿಗೆ ಮೂವರು ಪುರುಷರನ್ನು ಸಹ ವಿಚಾರಣೆ ನಡೆಸಿದ್ದಾರೆ ಎಂದು ಎಸ್‌ಪಿ ಸಂಜಯ್ ವರ್ಮಾ ತಿಳಿಸಿದ್ದಾರೆ.

ಪೋಷಕರು ಇರದೇ ಇದ್ದಾಗ ಅಂಜಲಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಮಕ್ಕಳು ನೋಡಿದ್ದರು ಹಾಗಾಗಿ ಅವರನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಬಳಸಿದ ಗುದ್ದಲಿಯನ್ನು ಪೊಲೀಸರು ಅಪರಾಧ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಫೋರೆನ್ಸಿಕ್ ತಂಡವು ತನಿಖೆಗಾಗಿ ಸ್ಥಳದಿಂದ ಗುದ್ದಲಿಯನ್ನು ವಶಪಡಿಸಿಕೊಂಡಿದೆ. ಫೋರೆನ್ಸಿಕ್ ತಂಡವು ಆರೋಪಿಯ ಮನೆಯ ಹೊರಗೆ ಬಿಸಿಲಿನಲ್ಲಿ ಒಣಗಲು ಹಾಕಿದ್ದ ಕೆಲವು ಬಟ್ಟೆಗಳನ್ನು ಸಹ ಪತ್ತೆ ಮಾಡಿದ್ದು, ವಶಪಡಿಸಿಕೊಳ್ಳಲಾಗಿದೆ.