ಅನಾಥ ವೃದ್ದನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ದುಷ್ಕರ್ಮಿಗಳು…

70
firstsuddi

ಬೆಂಗಳೂರು ಗ್ರಾಮಾಂತರ: ಅನಾಥ ವೃದ್ದನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ನೆಲಮಂಗಲದ ನೈಸ್ ರಸ್ತೆ ಬಳಿ ನಡೆದಿದೆ.

ಅಂಚೆಪಾಳ್ಯದ ನರಸಿಂಹಯ್ಯ(85) ಮೃತ ವ್ಯಕ್ತಿ. ಸಾವನ್ನಪ್ಪಿದ ನರಸಿಂಹಯ್ಯ ಅನಾಥವಾಗಿ ರಸ್ತೆ ಪಕ್ಕದಲ್ಲಿ ಜೀವನ ಮಾಡುತ್ತಿದ್ದ. ನೈಸ್ ರಸ್ತೆ ಬಳಿ ಒಂದು ಚಿಕ್ಕದಾದ ಪೇಪರ್ ಶೆಡ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ. ಇದೀಗ ವೃದ್ದನ ಮೇಲೆ ಏಕಾಏಕಿ ಕಲ್ಲು ಎತ್ತಿ ಹಾಕಿ
ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಈ ಕುರಿತು ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರಿಗಾಗಿ ಬಲೆ ಬೀಸಿದ್ದಾರೆ.