ಇವು ಸಣ್ಣ ಮೀನುಗಳು..ದೊಡ್ಡ ದೊಡ್ಡ ತಿಮಿಂಗಿಲಗಳು ಇವೆ : ಇಂದ್ರಜಿತ್ ಲಂಕೇಶ್.

94
firstsuddi

ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣವನ್ನು ತನಿಖೆ ಮಾಡಿದ ಸಿಸಿಬಿ ತಂಡ ರಿಪೋರ್ಟ್ ಸಲ್ಲಿಸಿದ್ದಾರೆ. ಜೊತೆಗೆ ಕೋಟ್ಯಾಂತರ ರೂಪಾಯಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ತಂಡದ ತನಿಖೆಗೆ ಬೆನ್ನು ತಟ್ಟಲೇ ಬೇಕು. ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಸಮಾಜದ ಹಿತ ದೃಷ್ಟಿಯಿಂದ ಸಮಾಧಾನ ತಂದಿದೆ. ಈ ಮಾಫಿಯಾದಲ್ಲಿ ಸಣ್ಣ ಮೀನುಗಳು ಇವು ಅಂತ ಮೊದಲೇ ಹೇಳಿದ್ದೆ, ಈಗ ಡ್ರಗ್ಸ್ ಪ್ರಕರಣದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳು ಇವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಇವತ್ತು ಕೋಟ್ಯಂತರ ರೂಪಾಯಿ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ ಆಗ್ತಿದೆ. ಇದರಲ್ಲಿ ದೊಡ್ಡ ತಿಮಿಂಗಿಲಗಳನ್ನ ಹಿಡಿಯಬೇಕಿದೆ. ಕೋರ್ಟ್ ನಲ್ಲಿ ಈ ಕೇಸ್ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಅದನ್ನು ಬಹಿರಂಗ ಮಾಡುವ ಹಾಗಿಲ್ಲ. ಸಿಸಿಬಿಗೆ ನಾನು ಎಲ್ಲ ರೀತಿಯಲ್ಲಿಯೂ ಸಹಕರಿಸಿರುವೆ. ಸಮಾಜ ಸ್ವಚ್ಚವಾಗಬೇಕು. ಸ್ಯಾಂಡಲ್ ವುಡ್ ನಲ್ಲಿ ನಡಿತಾ ಇರುವುದು ಸಾಬೀತಾಗಿದೆ. ಇಷ್ಟಕ್ಕೆ ಮುಗಿದಿಲ್ಲ ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಇದರ ಹಿಂದೆ ಯಾರ್ಯಾರು ಇದ್ದಾರೆ ಎನ್ನುವುದು ತನಿಖೆ ನಡೆಯಬೇಕು. ಈ ಕುರಿತಾಗಿ ತನಿಖೆ ನಡೆಸುತ್ತಿರುವ ಸಿಸಿಬಿ ತಂಡಕ್ಕೆ ಧನ್ಯವಾದ ಎಂದು ಹೇಳಿದರು.