ವಾಷಿಂಗ್ಟನ್ : ದಾಳಿಯಿಂದ ತತ್ತರಿಸಿರುವ ಉಕ್ರೇನ್ ಗೆ ತಕ್ಷಣಕ್ಕೆ ಹಣಕಾಸಿನ ನೆರವು ನೀಡಲು ಸಿದ್ದ ಎಂದು ವಿಶ್ವಬ್ಯಾಂಕ್ ಘೋಷಿಸಿದೆ.
ಉಕ್ರೇನ್ ನಲ್ಲಿ ರಷ್ಯಾ ದಾಳಿಯಿಂದಾಗುತ್ತಿರುವ ಹಿಂಸಾಚಾರ, ಜೀವಹಾನಿಯಿಂದ ವಿಶ್ವ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್, ವಿಶ್ವಬ್ಯಾಂಕ್ ನ ದೀರ್ಘಕಾಲದ ಪಾಲುದಾರ ಸದಸ್ಯ ರಾಷ್ಟ್ರವಾಗಿದೆ. ಈ ನಿರ್ಣಾಯಕ ಸಮಯದಲ್ಲಿ ಆ ದೇಶದ ಬೆಂಬಲವಾಗಿ ನಿಲ್ಲಲಾಗುವುದು ಎಂದು ವಿಶ್ವ ಬ್ಯಾಂಕ್ ಗ್ರೂಪ್ ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿಕೆ ನೀಡಿದ್ದಾರೆ.
ರಷ್ಯಾ ಯುದ್ಧ ಘೋಷಿಸುವ ಮುನ್ನ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಶ್ವಬ್ಯಾಂಕ್ ಅಧ್ಯಕ್ಷ, ನಿರ್ದೇಶಕರನ್ನು ಭೇಟಿಯಾಗಿ ಉಕ್ರೇನ್ ಪ್ರದೇಶದ ಜನರಿಗೆ ವಿಶ್ವ ಬ್ಯಾಂಕ್ ನ ಬೆಂಬಲ ಮತ್ತು ಸಹಾಯ ಒದಗಿಸಬೇಕು ಎಂದು ಕೋರಿದ್ದರು.










