ಊಟಕ್ಕೆ ಕರೆದು ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪ- ಖಾಸಗಿ ಕಂಪನಿ ಮ್ಯಾನೇಜರ್ ಬಂಧನ…

44
firstsuddi

ಬೆಂಗಳೂರು: ಊಟಕ್ಕೆ ಕರೆದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಕೆಆರ್ ಪುರಂ ನಿವಾಸಿ ಸೈಯದ್ ಅಕ್ರಂ (37) ಬಂಧಿತ ಆರೋಪಿ. ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್ 31ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದೂರಿನಲ್ಲೇನಿದೆ?
ನಾನು ಮತ್ತು ನನ್ನ ಪತಿ ಬಸವೇಶ್ವರನಗರದ ಕಂಪನಿಯಲ್ಲಿ ಟೆಲಿ ಕಾಲಿಂಗ್ ಕೆಲಸ ಮಾಡಿಕೊಂಡಿದ್ದೇವೆ. ನಮ್ಮ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಸೈಯದ್ ಅಕ್ರಂ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ. 31 ಡಿಸೆಂಬರ್ 2023 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ಸಮಯಕ್ಕೆ ಊಟ ಮಾಡಲು ಹೋಟೆಲ್ ಗೆ ಹೋಗೋಣವೆಂದು ಹೇಳಿದ್ದಾರೆ. ಬಳಿಕ ತನ್ನ ಬೈಕಿನಲ್ಲಿ ಆತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವನ್ನು ಮಾಡಿದ್ದಾರೆ. ನಂತರ ನವರಂಗ್ ಸರ್ಕಲ್ ಬಳಿ ಇಳಿಸಿ ಹೋಗಿದ್ದಾನೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುದಾಗಿ ಬೆದರಿಕೆಯನ್ನು ಹಾಕಿದ್ದಾರೆ.

ಘಟನೆ ನಡೆದ ಎರಡು ದಿನಗಳ ಬಳಿಕ ಜನವರಿ 2ರಂದು ನಗರದ ಬಸವೇಶ್ವರ ನಗರ ಠಾಣೆಯಲ್ಲಿ ಸೈಯದ್ ಅಕ್ರಂ ವಿರುದ್ಧ ಪ್ರಕರಣ ದಾಖಲಾಗಿದೆ.