ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ…

52
firstsuddi

ನವದೆಹಲಿ: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 39.50 ರೂ. ಇಳಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.

19 ಕಿಲೋ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ:-
ದೆಹಲಿ: 1,757.50 ರೂ.
ಕೋಲ್ಕತಾ: 1,869 ರೂ.
ಮುಂಬೈ: 1,710 ರೂ.
ಚೆನ್ನೈ: 1,929.50 ರೂ.

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ:- ಡೊಮೆಸ್ಟಿಕ್ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಆಗಸ್ಟ್ ತಿಂಗಳಲ್ಲಿ ದರ ಪರಿಷ್ಕರಣೆ ಆಗಿದ್ದೇ ಕೊನೆ. ಆಗಸ್ಟ್ 30ರಂದು ಗೃಹಬಳಕೆ ಗ್ಯಾಸ್ ಬೆಲೆ 200 ರೂನಷ್ಟು ಕಡಿಮೆ ಆಗಿತ್ತು.

ಬೆಂಗಳೂರಿನಲ್ಲಿ 14.2 ಕಿಲೋ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆ 905.50 ರೂ ಇದೆ. 19 ಕಿಲೋ ವಾಣಿಜ್ಯ ಎಲ್‌ಪಿಜಿ ಸಿಲಿಂಡ್ ಬೆಲೆ 1,794 ರೂ ಇದೆ. ಉಜ್ವಲ ಯೋಜನೆ ಹೊಂದಿದ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ ಸಿಗುತ್ತಿದೆ. ಉಜ್ವಲ ಯೋಜನೆ ಅಡಿ ವರ್ಷಕ್ಕೆ ಒಟ್ಟು 12 ಸಿಲಿಂಡರ್‌ಗಳಿಗೆ ಈ ಸಬ್ಸಿಡಿ ಹಣ ನೀಡಲಾಗುತ್ತದೆ.