ಐಎಂಎ ಮಾಜಿ ಅಧ್ಯಕ್ಷ, ಹೃದಯಶಾಸ್ತ್ರಜ್ಞ ಡಾ.ಅಗರ್ ವಾಲ್ ಕೊರೊನಾದಿಂದ ನಿಧನ…

120
firstsuddi

ನವದೆಹಲಿ : ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಿರಿಯ ಹೃದಯಶಾಸ್ತ್ರಜ್ಞ ಡಾ.ಕೆ.ಕೆ. ಅಗರ್ವಾಲ್ (62) ಅವರು ಕೊರೊನಾದಿಂದ ನಿಧನರಾಗಿದ್ದಾರೆ.

ಡಾ.ಕೆ.ಕೆ ಅಗರ್ವಾಲ್ ಅವರಿಗೆ ಸೋಂಕು ದೃಢಪಟ್ಟ ಹಿನ್ನಲೆ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ 11.30ಕ್ಕೆ ಚಿಕಿತ್ಸೆ ಫಲಾಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ತಮ್ಮ ಜೀವನವನ್ನು ಸಾರ್ವಜನಿಕರ ಆರೋಗ್ಯದ ಹಿತಕ್ಕಾಗಿ ಮುಡಿಪಾಗಿಟ್ಟಿದ್ದ ಅಗರ್ ವಾಲ್ ಅವರು, ಕೊರೊನಾ ಸಂದರ್ಭದಲ್ಲೂ ಹಲವಾರು ವೀಡಿಯೋ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ 100 ಮಿಲಿಯನ್ಗೂ ಹೆಚ್ಚಿನ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇವರ ಸಾವಿಗೆ ಅನೇಕ ವೈದ್ಯಕೀಯ ತಜ್ಞರು ಕಂಬನಿ ಮಿಡಿದಿದ್ದಾರೆ.