ಒಟ್ಟಿಗೆ ಮೂರು ಚಿರತೆಗಳ ದರ್ಶನ – ದೃಶ್ಯ ಸೆರೆ…

79
firstsuddi

ಚಾಮರಾಜನಗರ : ಬಂಡೀಪುರ ಸಫಾರಿ ವೇಳೆ ಮೂರು ಚಿರತೆಗಳು ಒಟ್ಟಿಗೆ ಕಾಣಿಸಿಕೊಂಡಿವೆ. ಈ ಅಪರೂಪದ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಅಜೀಜ್ ಎಂಬುವರ ಕ್ಯಾಮರಾದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಮರವೊಂದರ ರೆಂಬೆಯ ಮೇಲೆ 3 ಚಿರತೆಗಳು ಒಟ್ಟಿಗೆ ಕುಳಿತುಕೊಂಡಿದೆ. ಸಫಾರಿಗರನ್ನೇ ಈ 3 ಚಿರತೆಗಳು ಕೆಲವು ಸೆಕೆಂಡ್ ಗಳ ಕಾಲ ದಿಟ್ಟಿಸಿ ನೋಡುವಂತಿದೆ ಈ ದೃಶ್ಯ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಫಾರಿಗರಿಗೆ ವನ್ಯಪ್ರಾಣಿಗಳು ಸಖತ್ ದರ್ಶನ ಕೊಡುತ್ತಿವೆ.