ಮೂಡಿಗೆರೆ: ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದರು. ಕಾಫಿ,ಕಾಳುಮೆಣಸು,ಅಡಿಕೆ,ತೆಂಗು, ಸೇರಿದಂತೆ ಬಡ ರೈತ ಬೆಳೆದ ಬೆಳೆಯನ್ನು ಒತ್ತುವರಿ ಹೆಸರಲ್ಲಿ ನಾಶ ಮಾಡುವುದೆ ಕಾಂಗ್ರೆಸ್ ಸರಕಾರ ಸಾಧನೆ ಅಗಿದ್ದು. ಈಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮೂಲಕ ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ಹವಣಿಸುತ್ತಿದೆ ಎಂದು ಬಿಜೆಪಿ ಮಂಡಲ ವಕ್ತಾರ ವಿನಯ್ ಹಳೆಕೋಟೆ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇವರು ಹಿಂದಿನಿಂದಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ಕಿರುಕುಳ ನೀಡುತ್ತಾ ಬಂದಿದೆ. ಒತ್ತುವರಿ ಮಾಡಿರುವ ರೈತರು ಎಲ್ಲೂ ಕೂಡ ಹಸಿರು ನಾಶ ಮಾಡಿಲ್ಲ. ಹಸಿರನ್ನು ಉಳಿಸುವ ಕೆಲಸ ಮಾಡಿದ್ದಾರೆ. ಗುಡ್ಡಗಾಡಿನಲ್ಲಿ ಮಾಡಿರುವ ರೆಸಾರ್ಟ್, ಹೋಂಸ್ಟೇ ನಿಲ್ಲಿಸಲಿ. ಅದನ್ನು ಬಿಟ್ಟು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಅರಣ್ಯ ಕಂದಾಯ. ಒತ್ತುವರಿ ಹೆಸರಿನಲ್ಲಿ ಹೊಟ್ಟೆಪಾಡಿಗಾಗಿ ಕೃಷಿ ಮಾಡಿಕೊಂಡಿರುವ ಎರಡು ಮೂರು ಎಕರೆ ಇರುವ ಬಡ ರೈತನ ಭೂಮಿಯನ್ನು ತೆರವುಗೊಳಿಸುತ್ತಿರುವುದು ಬೇಸರದ ಸಂಗತಿ. ಪ್ರಶ್ನಸಿದರೆ ಅರಣ್ಯ ರಕ್ಷಣೆ. ಕೋರ್ಟ್ ಆದೇಶ ಎನ್ನುತ್ತಿದ್ದು. ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಹಿಂಸಿಸದೆ ರೈತನ ಹಿತ ಕಾಯಲಾಗುತ್ತಿತ್ತು. ಏಕೆ ಕಾಂಗ್ರೆಸ್ ಸರ್ಕಾರ ಬಂದಾಗಲೆ ಹೀಗಾಗುತ್ತದೆ ಎಂದರು. ಅರಣ್ಯ ಮಂತ್ರಿ ಈಶ್ವರ್ ಕಂಡ್ರೆ ಸೇರಿದಂತೆ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಇದ್ದು. ರಾಜ್ಯದ ನಾಗರಿಕರು ಮತ್ತು ರೈತರ ಹಿತವನ್ನು ಕಡೆಗಣಿಸುತ್ತಿದೆ. ಕೂಡಲೆ ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂದರು.










